ಶನಿವಾರ, ಜೂನ್ 25, 2022
25 °C
ಶ್ವಾಸಕೋಶದಲ್ಲಿ ಹೆಚ್ಚು ನೀರು ಪ್ರವೇಶ: ಶವಪರೀಕ್ಷೆ ವರದಿ

ಪಂಜಾಬ್‌: ಕೊಳವೆ ಬಾವಿಯಲ್ಲಿ ಬಿದ್ದಿದ್ದ 6 ವರ್ಷದ ಮಗು ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೋಷಿಯಾರ್‌ಪುರ, ಪಂಜಾಬ್: ಆಟವಾಡುತ್ತಿದ್ದ 6 ವರ್ಷದ ಬಾಲಕ 300 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಪಂಜಾಬ್‌ನ ಹೋಷಿಯಾರ್‌ಪುರ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಈ ಸಂಬಂಧ ಹೊಲದ ಮಾಲೀಕನ ವಿರುದ್ಧ ವಿವಿಧ ಐಪಿಸಿ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. 

ಕೊಳವೆ ಬಾವಿಯಲ್ಲಿ ಬಿದ್ದ ಮಗುವಿನ ಶ್ವಾಸಕೋಶದಲ್ಲಿ ಭಾರಿ ಪ್ರಮಾಣದ ನೀರು ತುಂಬಿಕೊಂಡಿರುವುದು ಶವ ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಮೃತ ಮಗುವನ್ನು ರಿತಿಕ್ ರೋಷನ್ ಎಂದು ಗುರುತಿಸಲಾಗಿದೆ. 

ಭಾನುವಾರ ಹೊಲದಲ್ಲಿ ಆಟವಾಡುತ್ತಿದ್ದ ರಿತಿಕ್‌ನನ್ನು ನಾಯಿಗಳು ಅಟ್ಟಿಸಿಕೊಂಡು ಬಂದಿದೆ. ಈ ವೇಳೆ ಆತ  ಹೆದರಿ, ಸೆಣಬಿನ ಚೀಲ ಮುಚ್ಚಲಾಗಿದ್ದ 9 ಇಂಚಿನ ಅಗಲ ಇರುವ ಕೊಳವೆ ಬಾವಿಯನ್ನು ಹತ್ತಿದ್ದ. ಆದರೆ, ಮಗುವಿನ ತೂಕ ಹೆಚ್ಚಿದ್ದರಿಂದ, ಮಗು ಕೊಳವೆ ಬಾವಿಯೊಳಗೆ ಕುಸಿದು ಬಿದ್ದಿದ್ದಾನೆ. 7 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ, ಮಗುವನ್ನು ಬಾವಿಯಿಂದ ಹೊರಗೆ ತರಲಾಗಿತ್ತು. ಆದರೆ, ಮಗುವಿನ ಶ್ವಾಸಕೋಶದಲ್ಲಿ ಹೆಚ್ಚು ನೀರು ಪ್ರವೇಶಿಸಿದ್ದರಿಂದ ಮಗು ಉಳಿಯಲಿಲ್ಲ ಎಂದು ಹಿರಿಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು