ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶಿ ದೇಗುಲದಲ್ಲಿ ಕೆನಡಾದಿಂದ ತಂದ ಅನ್ನಪೂರ್ಣದೇವಿ ವಿಗ್ರಹ ಪ್ರತಿಷ್ಠಾಪನೆ

ಪ್ರತಿಷ್ಠಾನ ಮಹೋತ್ಸವದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
Last Updated 15 ನವೆಂಬರ್ 2021, 11:28 IST
ಅಕ್ಷರ ಗಾತ್ರ

ವಾರಾಣಸಿ: 108 ವರ್ಷಗಳ ನಂತರ ಕೆನಡಾದಿಂದ ಭಾರತಕ್ಕೆ ಮರಳಿ ತರಲಾಗಿದ್ದ ಅನ್ನಪೂರ್ಣದೇವಿ ವಿಗ್ರಹವನ್ನು ಸೋಮವಾರ ಇಲ್ಲಿನ ಕಾಶಿ ವಿಶ್ವನಾಥ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅನ್ನಪೂರ್ಣದೇವಿ ವಿಗ್ರಹದ ಪ್ರತಿಷ್ಠಾನಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ಪ್ರತಿಷ್ಠಾಪನೆಗೂ ಮುನ್ನ ಅನ್ನಪೂರ್ಣದೇವಿ ವಿಗ್ರಹವನ್ನು ಬೆಳ್ಳಿಪಲ್ಲಕ್ಕಿಯಲ್ಲಿ ಮೆರವಣಿಗೆಯೊಂದಿಗೆ ದೇವಾಲಯಕ್ಕೆ ತರಲಾಯಿತು. ದೇವಿ ವಿಗ್ರಹವನ್ನು ಕೂರಿಸಿದ ಪಲ್ಲಕ್ಕಿಗೆ ಯೋಗಿ ಆದಿತ್ಯನಾಥ್ ಹೆಗಲು ನೀಡಿದ್ದರು.

ಬೆಳಿಗ್ಗೆ ದುರ್ಗಕುಂಡದ ಕೂಷ್ಮಾಂಡ ದೇವಸ್ಥಾನದಿಂದ ಮೆರವಣಿಗೆ ಆರಂಭವಾಯಿತು. ಸ್ತೋತ್ರಗಳ ಪಠಣದೊಂದಿಗೆ ಕಾಶಿವಿಶ್ವನಾಥ ದೇವಾಲಯದ ಈಶಾನ್ಯ ಮೂಲೆಯಲ್ಲಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು.

ಇದೇ ವೇಳೆ, ಕಾಶಿವಿಶ್ವನಾಥ ದೇವಾಲಯದ ಮರು ನಿರ್ಮಾಣದ ಸಂದರ್ಭದಲ್ಲಿ ತೆಗೆಯಲಾಗಿದ್ದ ಐದು ದೇವರ ವಿಗ್ರಹಗಳನ್ನೂ ಪ್ರತಿಷ್ಠಾನೆ ಮಾಡಲಾಯಿತು.

ಎರಡು ದಿನಗಳ ಭೇಟಿಗಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ರಾತ್ರಿ ಇಲ್ಲಿಗೆ ಆಗಮಿಸಿದ್ದರು. ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಅವರು ಕಾಶಿ ವಿಶ್ವನಾಥ ದೇವಾಲಯದ ಕಾರಿಡಾರ್ ನಿರ್ಮಾಣ ಕಾಮಗಾರಿಯನ್ನೂ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT