ಗುರುವಾರ , ಅಕ್ಟೋಬರ್ 29, 2020
19 °C

ಜಮ್ಮು: ಭಾರತ- ಪಾಕ್ ಗಡಿ ಬಳಿ ಸುರಂಗ ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ/ಜಮ್ಮು: ಜಮ್ಮುವಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಅಂತರರಾಷ್ಟ್ರೀಯ ಗಡಿಗೆ ಹೊಂದಿಕೊಂಡಂತೆ ಸುರಂಗ ಮಾರ್ಗ ಇರುವುದನ್ನು ಗಡಿಭದ್ರತಾ ಪಡೆ (ಬಿಎಸ್ಎಫ್) ಶನಿವಾರ ಪತ್ತೆ ಹಚ್ಚಿದೆ.

ಸುರಂಗಮಾರ್ಗವು ಉಗ್ರರು ಒಳನುಸುಳಲು ಹಾಗೂ ಮಾದಕವಸ್ತುಗಳ ಸಾಗಾಟಕ್ಕೆ ಬಳಕೆ ಮಾಡಲಾಗುತಿತ್ತು ಎಂದು ಶಂಕಿಸಲಾಗಿದೆ. ಈ ಬೆಳವಣಿಗೆ ಹಿಂದೆಯೇ ಇಂಥ ಗುಪ್ತ ತಾಣಗಳ ಪತ್ತೆಗೆ ಕಾರ್ಯಾಚರಣೆಯನ್ನು ಬಿಎಸ್ಎಫ್ ಆರಂಭಿಸಿದೆ.

ಬಿಎಸ್ಎಫ್‌ ಮಹಾಪ್ರದಾನ ನಿರ್ದೇಶಕ ರಾಕೇಶ್ ಆಸ್ತಾನಾ ಅವರು, ಗಡಿಯುದ್ದಕ್ಕೂ ಒಳನುಸುಳುವಿಕೆಗೆ ಯಾವುದೇ ಆಸ್ಪದ ಇಲ್ಲದಂತೆ ಎಚ್ಚರ ವಹಿಸಬೇಕು ಎಂದು ಕಮಾಂಡರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಗಡಿರೇಖೆಯಿಂದ ಸುಮಾರು 50 ಮೀಟರ್ ದೂರದಲ್ಲಿ, ಭಾರತದ ಭೂಪ್ರದೇಶದಲ್ಲಿ ಸುರಂಗ ಪತ್ತೆಯಾಗಿದ್ದು, ಗುರುವಾರ ಬೆಳಿಗ್ಗೆ ಸಾಂಬಾ ವಲಯದಲ್ಲಿ ಗಸ್ತು ಸೇವೆಯಲ್ಲಿದ್ದ ಬಿಎಸ್ಎಫ್ ಸಿಬ್ಬಂದಿ ಗುರುತಿಸಿದ್ದಾರೆ.

ಮರಳಿನ ಮೂಟೆಗಳಿಂದ ಸುರಂಗವನ್ನು ಮುಚ್ಚಿದ್ದರು. ಅದರ ಮೇಲೆ ಪಾಕಿಸ್ತಾನದ ಚಿಹ್ನೆಗಳಿದ್ದವು. ಈಚೆಗೆ ಸುರಿದಿದ್ದ ಮಳೆಯಿಂದ ಕೆಲ ಭಾಗ ಕುಸಿದಿತ್ತು. ಶಂಕೆಯಿಂದ ಪರಿಶೀಲಿಸಿದಾಗ ಇದು ಗೊತ್ತಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಂತ್ರದ ನೆರವಿನಿಂದ ಸುರಂಗ ಮಾರ್ಗವನ್ನು ಗುರುತಿಸಲಾಯಿತು. ಸುರಂಗ ವೇಲ್ ಬ್ಯಾಕ್ ಪೋಸ್ಟ್ ಬಳಿ ಕಂಡುಬಂದಿದ್ದು, 20 ಮೀಟರ್ ಉದ್ದ, 25 ಅಡಿ ಆಳವಿದ್ದು, ನಿರ್ಮಾಣ ಕಾರ್ಯ ನಡೆದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಸುಮಾರು 8-10 ಮರಳು ತುಂಬಿದ್ದ ಮೂಟೆಗಳು ಸಿಕ್ಕಿವೆ. ಚೀಲದ ಮೇಲೆ ಕರಾಚಿ ಮತ್ತು ಶಾಕಾರ್ ಘರ್ ಎಂದು ಬರೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು