ಶನಿವಾರ, ಜೂನ್ 12, 2021
28 °C

ಬಿ.ಎಸ್.ಎಫ್.ನಿಂದ 15ರಂದು ಸ್ವಾತಂತ್ರ್ಯದ ದಿನದ ನಡಿಗೆ ಕಾರ್ಯಕ್ರಮ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪಾಕಿಸ್ತಾನ, ಬಾಂಗ್ಲಾದೇಶ ಗಡಿಗೆ ಹೊಂದಿಕೊಂಡಂತೆ ಇರುವ ತನ್ನ ಎಲ್ಲ ಘಟಕಗಳಲ್ಲಿ ಆಗಸ್ಟ್ 15ರಂದು 'ಸ್ವಾತಂತ್ರ್ಯ ದಿನದ ನಡಿಗೆ' ಕಾರ್ಯಕ್ರಮ ಆಯೋಜಿಸಬೇಕು ಎಂದು ಗಡಿ ಭದ್ರತಾ ಪಡೆ (ಬಿಎಸ್ಎಫ್) ಸೂಚಿಸಿದೆ.

ಹಿರಿಯ ಅಧಿಕಾರಿಗಳು ಆಗಸ್ಟ್ 14 ಮತ್ತು 15ರ ರಾತ್ರಿಯನ್ನು ಪ್ರತಿ ಗಡಿ ಭಾಗದ ನಿಯೋಜಿತ ತುಕಡಿಗಳಲ್ಲಿ ಕಳೆಯುವಂತೆ ಕ್ರಮವಹಿಸಬೇಕು ಎಂದು ತನ್ನ ಎಲ್ಲ ಕಮಾಂಡರ್ ಗಳಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 74ನೇ ಸ್ವಾತಂತ್ರ್ಯೊತ್ಸವದ ನಿಮಿತ್ತ ಈ ತೀರ್ಮಾನಕ್ಕೆ ಬರಲಾಗಿದೆ.

ಮುಖ್ಯ ಕಚೇರಿಯಿಂದ ಅಗಸ್ಟ್ 6ರಂದೇ  ಈ ಕುರಿತು ಆದೇಶವನ್ನು ಹೊರಡಿಸಲಾಗಿದೆ ಎಂದು ಬಿ.ಎಸ್.ಎಫ್ ಮುಖ್ಯಸ್ಥ ಎಸ್.ಎಸ್.ದೇಸ್ವಾಲ್ ಅವರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು