ಅಂತರರಾಷ್ಟ್ರೀಯ ಗಡಿ ಬಳಿ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

ಚಂಡೀಗಢ: ಪಾಕಿಸ್ತಾನದಿಂದ ಪಂಜಾಬ್‌ನ ಅಮೃತಸರ ಜಿಲ್ಲೆಗೆ ಪ್ರವೇಶಿಸಿದ್ದ ಡ್ರೋನ್ ಒಂದನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ಹೊಡೆದುರುಳಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಅಮೃತಸರ ನಗರದಿಂದ 34 ಕಿಮೀ ದೂರದಲ್ಲಿರುವ ದಾವೊಕೆ ಗ್ರಾಮಕ್ಕೆ ಶನಿವಾರ ಸಂಜೆ ಡ್ರೋನ್ ಪ್ರವೇಶಿಸುತ್ತಿರುವುದನ್ನು ಗಮನಿಸಿದ ಭದ್ರತಾ ಪಡೆ ಸಿಬ್ಬಂದಿ ಅದನ್ನು ಕೂಡಲೇ ಹೊಡೆದುರುಳಿಸಿದರು. ಭಾಗಶಃ ಹಾನಿಗೀಡಾಗಿದ್ದ ಆ ಡ್ರೋನ್‌ಅನ್ನು ಸಿಬ್ಬಂದಿ ವಶಕ್ಕೆ ತೆಗೆದುಕೊಡಿದ್ದಾರೆ. ನಾಲ್ಕು ರೂಟರ್‌ಗಳನ್ನು ಹೊಂದಿರುವ ಡಿಜೆಐ ಮ್ರಾಟ್ರಿಸ್ 300 ಆರ್‌ಟಿಕೆ ಡ್ರೋನ್ (ಚೀನಾ ಡ್ರೋನ್) ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.