ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗಾಗಿ ಮನೆಗಳನ್ನು ಕಟ್ಟಿ, ಅವರನ್ನು ಲಕ್ಷಾಧಿಪತಿಗಳನ್ನಾಗಿಸಿದ್ದೇವೆ: ಮೋದಿ

Last Updated 2 ಫೆಬ್ರುವರಿ 2022, 16:50 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ಏಳು ವರ್ಷಗಳಲ್ಲಿ ತಮ್ಮ ಸರ್ಕಾರ ಮೂರು ಕೋಟಿ ಬಡವರಿಗೆ ಪಕ್ಕಾ ಮನೆಗಳನ್ನು ನೀಡಿ ಅವರನ್ನು ಲಕ್ಪಾಧಿಪತಿಗಳನ್ನಾಗಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ, ಅಂತಹ ಮನೆಗಳಲ್ಲಿ ಹೆಚ್ಚಿನ ಮನೆಗಳು ಮಹಿಳೆಯರ ಹೆಸರಿನಲ್ಲಿವೆ ಎಂದು ಒತ್ತಿ ಹೇಳಿದರು.

ಬಿಜೆಪಿ ಆಯೋಜಿಸಿದ್ದ ಆತ್ಮನಿರ್ಭರ ಅರ್ಥವ್ಯವಸ್ಥಾ (ಸ್ವಾವಲಂಬಿ ಆರ್ಥಿಕತೆ) ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವಂತ ಮನೆ ಹೊಂದುವುದು ಬಡವರ ದೊಡ್ಡ ಕನಸಾಗಿದೆ ಎಂದರು.

ಈ ಬಾರಿಯ ಬಜೆಟ್‌ನಲ್ಲಿ ಬಡವರಿಗೆ 80 ಲಕ್ಷ ಪಕ್ಕಾ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಹೇಳಲಾಗಿದ್ದು, ಇದಕ್ಕಾಗಿ ಸುಮಾರು ₹48,000 ಕೋಟಿಯನ್ನು ವ್ಯಯಿಸಲಾಗುವುದು ಎಂದ ಮೋದಿ, ಇದು ಜನರನ್ನು ಬಡತನದಿಂದ ಹೊರತರುವ ಮಾರ್ಗವಾಗಿದೆ ಎಂದು ಹೇಳಿದರು.

ಮನೆ ಸಿಕ್ಕರೆ ಬಡವನಿಗೆ ಧೈರ್ಯ ಬರುತ್ತದೆ. ಜನರ ಶಕ್ತಿ ನಮಗೆ ಗೊತ್ತಿರಲಿಲ್ಲ, ರಾಜಕೀಯ ಲಾಭಕ್ಕಾಗಿ ಬಡವರಾಗಿದ್ದವರು ಈ ದೇಶದಲ್ಲಿ ಸಾಕಷ್ಟು ಮಂದಿ ಇದ್ದಾರೆ ಎಂದರು.

ಬಡವರ ಹೆಸರಿನಲ್ಲಿ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆದಾಗ ಅವರ ಆತ್ಮಗೌರವ ಹೆಚ್ಚಾಗುತ್ತದೆ ಎಂದು ಮೋದಿ ಅವರು ಜನ್-ಧನ್ ಯೋಜನೆಯ ಉದಾಹರಣೆಯನ್ನು ಉಲ್ಲೇಖಿಸಿದರು.

ಬಡವರಿಗೆ ಸರಕಾರ ನಿರ್ಮಿಸಿಕೊಡುವ ಮನೆಗಳು ಒಂದು ರೀತಿಯಲ್ಲಿ ಅವರನ್ನು ಲಕ್ಷಧಿಪತಿಯನ್ನಾಗಿ ಮಾಡುತ್ತವೆ ಎಂದರು.

‘ನಾನು ಚಿಕ್ಕವನಿದ್ದಾಗ ಲಕ್ಷಧಿಪತಿ ಎಂಬ ಮಾತು ತುಂಬಾ ಅಗಾಧವಾಗಿ ಕೇಳಿಸುತ್ತಿತ್ತು....ಆದರೆ ನಾವು ಬಡವರಿಗೆ ಕೊಟ್ಟ ಮನೆಗಳನ್ನು ಅದರ ಮೌಲ್ಯದ ದೃಷ್ಟಿಯಿಂದ ನೋಡಿದರೆ ಕಳೆದ ಏಳು ವರ್ಷಗಳಲ್ಲಿ ಮೂರು ಕೋಟಿ ಬಡವರಿಗೆ ಪಕ್ಕಾ ಮನೆಗಳನ್ನು ನೀಡಿ ಅವರನ್ನು ಲಕ್ಷಧಿಪತಿಗಳನ್ನಾಗಿ ಮಾಡಿದೆವು’ಎಂದು ಮೋದಿ ಹೇಳಿದರು.

‘ಬಡವರು ಮತ್ತು ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದವರು ಈಗ ಸ್ವಂತ ಮನೆ ಹೊಂದಿದ್ದಾರೆ, ಹಿಂದಿನ ಸರ್ಕಾರಗಳಿಗೆ ಹೋಲಿಸಿದರೆ, ನಮ್ಮ ಸರ್ಕಾರವು ಈ ಮನೆಗಳ ನಿರ್ಮಾಣಕ್ಕೆ ನೀಡುವ ಮೊತ್ತ ಮತ್ತು ಮನೆಗಳ ಗಾತ್ರವನ್ನು ಹೆಚ್ಚಿಸಿದೆ ಇದರಿಂದ ಮಕ್ಕಳ ಶಿಕ್ಷಣಕ್ಕೆ ಜಾಗವಿರುತ್ತದೆ. ಮನೆಗಳು ದೊಡ್ಡದಾಗಿವೆ. ಈ ಮನೆಗಳಲ್ಲಿ ಹೆಚ್ಚಿನವು ಮಹಿಳೆಯರ ಹೆಸರಿನಲ್ಲಿವೆ, ನಾವು ಮಹಿಳೆಯರನ್ನು ಮಾಲೀಕರನ್ನಾಗಿ ಮಾಡಿದ್ದೇವೆ’ಎಂದು ಅವರು ಹೇಳಿದರು.

‘ನಾವು ಯಾವಾಗಲೂ ಸಾಮಾಜಿಕ ನ್ಯಾಯಕ್ಕಾಗಿ ಕೆಲಸ ಮಾಡುತ್ತೇವೆ ಮತ್ತು ಅದನ್ನು ನಮ್ಮ ಜವಾಬ್ದಾರಿ ಎಂದು ಪರಿಗಣಿಸುತ್ತೇವೆ’ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT