ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಬುಲ್ಲಿ ಬಾಯಿ' ಆ್ಯಪ್ ಪ್ರಕರಣ: ದೂರುದಾರರಿಗೆ ಫೋನ್‌ ಮೂಲಕ ಬೆದರಿಕೆ, ದೂರು ದಾಖಲು

Last Updated 11 ಜನವರಿ 2022, 2:33 IST
ಅಕ್ಷರ ಗಾತ್ರ

ಮುಂಬೈ: 'ಬುಲ್ಲಿ ಬಾಯಿ' ಆ್ಯಪ್ ಪ್ರಕರಣದ ದೂರುದಾರರಿಗೆ ಫೋನ್‌ ಮೂಲಕ ಬೆದರಿಕೆ ಹಾಕಿದ ಆರೋಪದಡಿ ಮುಂಬೈ ಪೊಲೀಸ್‌ನ ಸೈಬರ್ ವಿಭಾಗವು ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿಕೊಂಡಿದೆ.

ಕರೆ ಮಾಡಿದವರು ಫೋನ್ ಮೂಲಕ ಬೆದರಿಕೆ ಹಾಕಿದರು ಮತ್ತು ತಮ್ಮ ಹೆಸರುಗಳನ್ನು ಏಕೆ ಬಹಿರಂಗಪಡಿಸಿದೆ. ಅದರಿಂದಾಗಿ ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪ್ರಶ್ನಿಸಿದರು ಎಂದು ದೂರುದಾರರು ಪೊಲೀಸರಿಗೆ ತಿಳಿಸಿರುವುದಾಗಿ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಸೈಬರ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಶನಿವಾರ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಕರೆ ಮಾಡಿದವರಿಗೆ ದೂರುದಾರರ ಮೊಬೈಲ್ ಫೋನ್ ಸಂಖ್ಯೆ ಹೇಗೆ ಸಿಕ್ಕಿತು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

ಈ ಬಗ್ಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಪ್ರಕರಣವು 'ಬುಲ್ಲಿ ಬಾಯಿ' ಅಪ್ಲಿಕೇಶನ್‌ನ ರಚನೆಗೆ ಸಂಬಂಧಿಸಿದ್ದಾಗಿದ್ದು, ಇಲ್ಲಿ ಮುಸ್ಲಿಂ ಮಹಿಳೆಯರ ಚಿತ್ರಗಳನ್ನು ಹಾಕಿ ಹರಾಜಿಗೆ ಇಡಲಾಗಿದೆ ಎಂದು ಬರೆಯಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಸೈಬರ್ ಪೊಲೀಸರು ಉತ್ತರಾಖಂಡದ ಶ್ವೇತಾ ಸಿಂಗ್ ಮತ್ತು ಮಯಾಂಕ್ ರಾವಲ್ ಹಾಗೂ ಬೆಂಗಳೂರಿನಿಂದ ವಿಶಾಲ್ ಕುಮಾರ್ ಝಾ ಅವರನ್ನು ಬಂಧಿಸಿದ್ದರು.

ಮತ್ತೊಂದು ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರ ವಿಶೇಷ ತಂಡವು ಜನವರಿ 6ರಂದು ಅಸ್ಸಾಂ ಮೂಲದ ನೀರಜ್‌ ಬಿಷ್ಣೋಯ್‌ ಎಂಬಾತನನ್ನು ಬಂಧಿಸಿತ್ತು. ಪೊಲೀಸರ ಪ್ರಕಾರ, ಆ್ಯಪ್‌ನ ಪ್ರಮುಖ ಸೃಷ್ಟಿಕರ್ತ ಬಿಷ್ಣೋಯ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT