ಸೋಮವಾರ, ಜೂನ್ 14, 2021
27 °C
ಫೈನಾನ್ಸ್‌ ಕಂಪನಿ ಏಜೆಂಟರ ಕೃತ್ಯ: ಪೊಲೀಸರ ಹೇಳಿಕೆ

ಆಗ್ರಾ: ಖಾಸಗಿ ಬಸ್‌ ಅಪಹರಣ

ಪಿಟಿಐ Updated:

ಅಕ್ಷರ ಗಾತ್ರ : | |

prajavani

ಆಗ್ರಾ/ಲಖನೌ: ಹರಿಯಾಣದ ಗುರುಗ್ರಾಮದಿಂದ ಮಧ್ಯಪ್ರದೇಶದ ಪನ್ನಾ ನಗರಕ್ಕೆ ಹೊರಟ್ಟಿದ್ದ ಖಾಸಗಿ ಬಸ್‌ವೊಂದನ್ನು ಆಗ್ರಾದಲ್ಲಿ ಬುಧವಾರ ಅಪಹರಿಸಲಾಗಿದೆ.

ಹಣಕಾಸು ವಿಷಯಕ್ಕಾಗಿ ಈ ಅಪಹರಣ ನಡೆದಿದೆ. ಫೈನಾನ್ಸ್‌ ಕಂಪನಿಯೊಂದರ ಏಜೆಂಟರು ಬಸ್‌ ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಲಕ, ಸಿಬ್ಬಂದಿ ಹಾಗೂ ಬಸ್‌ನಲ್ಲಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅವನೀಶ್‌ ಅವಸ್ಥಿ ತಿಳಿಸಿದ್ದಾರೆ. 

‘ಬಸ್‌ನಿಂದ ತಪ್ಪಿಸಿಕೊಂಡಿದ್ದ ಮೂವರು ಪ್ರಯಾಣಿಕರು ಈ ಅಪಹರಣ ಕೃತ್ಯದ ಕುರಿತು ಮಾಹಿತಿ ನೀಡಿದರು. ಈ ಬಸ್‌ ಖರೀದಿಸಲು ಸಾಲ ನೀಡಿದ್ದ ಫೈನಾನ್ಸ್‌ ಕಂಪನಿಯೇ ಬಸ್‌ಅನ್ನು ಅಪಹರಿಸಿದ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆತಿದ್ದು, ಬಸ್‌ಗಾಗಿ ಶೋಧ ಕಾರ್ಯ ನಡೆದಿದೆ’ ಎಂದು ಹಿರಿಯ ಜಿಲ್ಲಾ ಪೊಲೀಸ್‌ಅಧಿಕಾರಿ ಬಬ್ಲೂಕುಮಾರ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು