ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2015–20ರ ನಡುವೆ ಸಿಆರ್‌ಜೆಡ್‌ನಲ್ಲಿ ಹಲವು ಯೋಜನೆಗಳಿಗೆ ಮಂಜೂರಾತಿ

ಸಿಎಜಿ ವರದಿಯಲ್ಲಿ ತರಾಟೆ, ಕರ್ನಾಟಕದಲ್ಲಿ ರಾಜ್ಯ ಕರಾವಳಿ ನಿರ್ವಹಣಾ ಪ್ರಾಧಿಕಾರ ಪುನರ್ ರಚಿಸದೆ ಇರುವುದಕ್ಕೆ ಆಕ್ಷೇಪ
Last Updated 9 ಆಗಸ್ಟ್ 2022, 12:33 IST
ಅಕ್ಷರ ಗಾತ್ರ

ನವದೆಹಲಿ: ಶಾಶ್ವತ ಯೋಜನೆಗಳ ಕುರಿತಂತೆ ಅಸಮರ್ಪಕವಾಗಿರುವ ಪರಿಸರ ಪರಿಣಾಮ ಮೌಲ್ಯಮಾಪನ (ಇಐಎ) ವರದಿಯ ಜತೆಗೆ, 2015–2020ರ ನಡುವೆ ಕರಾವಳಿ ನಿಯಂತ್ರಣ ವಲಯದಲ್ಲಿ (ಸಿಆರ್‌ಜೆಡ್‌) ಹಲವು ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ಭಾರತೀಯ ಮಹಾಲೇಖಪಾಲರ (ಸಿಎಜಿ) ಹೊಸ ವರದಿ ಹೇಳಿದೆ.

ಇಐಎ ವರದಿ ತಯಾರಿಯಲ್ಲಿ ತೊಡಗಿಸಿಕೊಂಡಿದ್ದ ಸಲಹೆಗಾರರಿಗೆ ಮಾನ್ಯತೆ ಇಲ್ಲದೆ ಇರುವುದು, ಹಳೆಯ ಆಧಾರರಹಿತ ದತ್ತಾಂಶಗಳ ಬಳಕೆ, ಯೋಜನೆಯ ಪರಿಸರ ಪರಿಣಾಮಗಳ ಕುರಿತು ಮೌಲ್ಯಮಾಪನ ಮಾಡದಿರುವುದು, ಯೋಜನಾ ಪ್ರದೇಶಗಳಲ್ಲಿ ಉಂಟಾಗುವ ವಿಪತ್ತುಗಳನ್ನು ಪರಿಹರಿಸದಿರುವುದು ಇಂತಹ ಯೋಜನೆಗಳಿಗೆ ಮಂಜೂರಾತಿ ನೀಡಲು ಕಾರಣವಾಗಿದೆ ಎಂದೂ ವರದಿ ಹೇಳಿದೆ.

ರಾಷ್ಟ್ರೀಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ (ಎನ್‌ಸಿಡಬ್ಲ್ಯುಎಂಎ), ರಾಜ್ಯ, ಕೇಂದ್ರಾಡಳಿತ ಪ್ರದೇಶದ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಗಳು (ಎಸ್‌ಸಿಜೆಡ್‌ಎಂಎ,ಯುಟಿಸಿಜೆಡ್‌ಎಂಎ) ಮತ್ತು ಜಿಲ್ಲಾಮಟ್ಟದ ಸಮಿತಿಗಳು (ಡಿಎಲ್‌ಸಿ) ಸಿಆರ್‌ಜೆಡ್‌ ಅಧಿಸೂಚನೆಯ ಅನುಷ್ಠಾನಕ್ಕೆ ಜವಾಬ್ದಾರರಾಗಿರುವ ಮೂರು ಸಂಸ್ಥೆಗಳಾಗಿವೆ.

ರಾಜ್ಯ, ಕೇಂದ್ರಾಡಳಿತ ಪ್ರದೇಶದ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಗಳು ಯೋಜನೆಗಳನ್ನು ಸಂಬಂಧಿತ ಅಧಿಕಾರಿಗಳಿಗೆ ಶಿಫಾರಸು ಮಾಡುವ ಬದಲು ಸ್ವಂತವಾಗಿ ಅನುಮತಿ ನೀಡಿರುವುದನ್ನು ಗಮನಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅವರು ಕಡ್ಡಾಯ ದಾಖಲೆಗಳನ್ನು ಸಲ್ಲಿಸದೆ ಅನೇಕ ಯೋಜನೆಗಳನ್ನು ಶಿಫಾರಸು ಮಾಡಿದ್ದಾರೆ ಎಂದೂ ಹೇಳಿದೆ. ಕರ್ನಾಟಕದಲ್ಲಿಎಸ್‌ಸಿಜೆಡ್‌ಎಂಎ ಅನ್ನು ಪುನರ್‌ರಚಿಸಲಾಗಿಲ್ಲ ಎಂದೂ ವರದಿ ಹೇಳಿದೆ.

ಎಚ್‌ಟಿಎಲ್‌ನಿಂದ (ಹೈಟೈಡ್‌ ಲೈನ್) 500 ಮೀ. ವರೆಗಿನ ಕರಾವಳಿ ಭೂಮಿ ಮತ್ತು ಉಬ್ಬರವಿಳಿತಕ್ಕೆ ಒಳಪಟ್ಟಿರುವ ನದಿ, ಹಿನ್ನೀರು, ತೊರೆ, ಕೆರೆ ಮತ್ತು ನದಿಮುಖಜದಿಂದ 100 ಮೀ ವರೆಗಿನ ಪ್ರದೇಶವನ್ನುಸಿಆರ್‌ಜೆಡ್‌ ಎಂದು ಕರೆಯಲಾಗುತ್ತದೆ.

ಕರಾವಳಿಯ ಪರಿಸರ ಮತ್ತು ಸಮುದ್ರ ಪ್ರದೇಶಗಳ ಸಂರಂಕ್ಷಣೆಗಾಗಿ ಮತ್ತು ಮೀನುಗಾರ ಸಮುದಾಯ ಮತ್ತು ಇತರ ಸಮುದಾಯದವರ ಜೀವನೋಪಾಯದ ಭದ್ರತೆಗಾಗಿ ಪರಿಸರ ಸಂರಕ್ಷಣಾ ಕಾಯಿದೆ 1986ರ ಅಡಿಯಲ್ಲಿ ಸರ್ಕಾರವು 2019ರಲ್ಲಿ ಸಿಆರ್‌ಜೆಡ್‌ ಮಾನದಂಡಗಳನ್ನು ಸೂಚಿಸಿದೆ.

ಔಷಧ ಪೂರೈಕೆಯಲ್ಲಿ ಕೊರತೆ:ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್‌) ಅಡಿಯಲ್ಲಿ ಔಷಧಿಗಳ ದಾಸ್ತಾನು ಮತ್ತು ಪೂರೈಕೆ ಸರಪಳಿಯಲ್ಲಿನ ಹಲವಾರು ಲೋಪಗಳನ್ನು ಸಿಎಜಿ ವರದಿ ಎತ್ತಿ ತೋರಿಸಿದೆ.

ಇದು ಕ್ಷೇಮ ಕೇಂದ್ರಗಳಲ್ಲಿ ಔಷಧಗಳ ಕೊರತೆಗೆ ಕಾರಣವಾಗಿದೆ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT