ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಪ್‌ವೇಗಳ ಸುರಕ್ಷತಾ ಪರಿಶೋಧನೆಗೆ ಸೂಚನೆ

Last Updated 12 ಏಪ್ರಿಲ್ 2022, 16:25 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜಾರ್ಖಂಡ್‌ನ ದೇವಘರ್‌ ರೋಪ್‌ವೇ ಅವಘಡದ ಬೆನ್ನಲ್ಲೇ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪ್ರತಿ ರೋಪ್‌ವೇ ಯೋಜನೆಯ ಸುರಕ್ಷತಾ ಪರಿಶೋಧನೆ ಕೈಗೊಂಡು, ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಈ ಬಗ್ಗೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿರುವ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾಳ್‌, ‘ಪ್ರತಿ ರೋಪ್‌ವೇಗಳಲ್ಲಿ ಅದರ ನಿರ್ವಹಣಾ ಕೈಪಿಡಿ ಹಾಗೂ ಕಾರ್ಯತಂತ್ರದ ವಿವರಣೆ ನೀಡಬೇಕು ಎಂದು ಹೇಳಿದೆ.

ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಒಂದು ಸಮರ್ಥ ಸಂಸ್ಥೆಯನ್ನು ನಿಯೋಜಿಸಿ, ಪ್ರತಿ ರೋಪ್‌ವೇ ಯೋಜನೆಗಳ ಪರಿಶೋಧನೆ ಮಾಡಿಸಬೇಕು. ಹಾಗೂ ಈ ಸಮಯದಲ್ಲಿ ರೋಪ್‌ವೇ ಘಟಕಗಳು ಎಲ್ಲ ರೀತಿಯ ಸಹಕಾರವನ್ನೂ ನೀಡಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT