ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ | ಪ್ರಚೋದನಕಾರಿ ಭಾಷಣ; ಸಂಘ ಪರಿವಾರದ 200 ಮಂದಿ ವಿರುದ್ಧ ಪ್ರಕರಣ

Last Updated 6 ಜನವರಿ 2022, 12:35 IST
ಅಕ್ಷರ ಗಾತ್ರ

ಕಣ್ಣೂರು (ಕೇರಳ): ಹಿಂದೂ ಐಕ್ಯ ವೇದಿ ಸಂಘಟನೆ, ಇಲ್ಲಿ ಆಯೋಜಿಸಿದ್ದಪ್ರತಿಭಟನಾ ರ‍್ಯಾಲಿಯೊಂದರಲ್ಲಿ ಪ್ರಚೋದನಕಾರಿ ಭಾಷಣ ಮತ್ತುಘೋಷಣೆಗಳನ್ನು ಕೂಗಿದ ಆರೋಪದಡಿ ಸಂಘ ಪರಿವಾರದ ಪ್ರಮುಖ ನಾಯಕ ವಲ್ಸಾನ್‌ ತಿಲಂಕೆರಿ ಸೇರಿದಂತೆ 200 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

‘ಕೇರಳದಲ್ಲಿರುವ ’ಉಗ್ರಗಾಮಿ ಶಕ್ತಿಗಳ’ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಬುಧವಾರ ಹಿಂದೂ ಐಕ್ಯ ವೇದಿ ಸಂಘಟನೆಯು ಪ್ರತಿಭಟನಾ ರ‍್ಯಾಲಿಯನ್ನು ಆಯೋಜಿಸಿತ್ತು. ಜಿಲ್ಲೆಯ ಬ್ಯಾಂಕ್‌ ರೋಡ್‌ನಿಂದ ಕ್ರೀಡಾಂಗಣವೊಂದರ ತನಕ ಮೆರವಣಿಗೆಯನ್ನು ನಡೆಸಲಾಗಿತ್ತು. ತಿಲಂಕೆರಿ ಈ ಸಂಘಟನೆಯ ಕಾರ್ಯಾಧ್ಯಕ್ಷರಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ಇತ್ತೀಚಿಗೆ ನಡೆದ ಆರ್‌ಎಸ್‌ಎಸ್‌ ಕಾರ್ಯಕರ್ತರ ಹತ್ಯೆಯಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ) ಮತ್ತು ಸೋಷಿಯಲ್‌ ಡೆಮಾಕ್ರಾಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿ‍ಪಿಐ) ಸಂಘಟನೆಯ ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು.ಇದನ್ನು ಖಂಡಿಸಿ ರಾಜ್ಯದ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಬುಧವಾರ ಪ್ರತಿಭಟನಾ ರ‍್ಯಾಲಿಯನ್ನು ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT