ಚೆನ್ನೈ: ಜಾತಿಯೇ ತಮ್ಮ 'ದೊಡ್ಡ' ರಾಜಕೀಯ ಪ್ರತಿಸ್ಪರ್ಧಿ ಎಂದು ಬಹುಭಾಷಾ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಭಾನುವಾರ ಹೇಳಿದ್ದಾರೆ.
ಮಕ್ಕಳ್ ನೀದಿ ಮೈಯಂ ಪಕ್ಷದ ಅಧ್ಯಕ್ಷ ಕಮಲ್ ಹಾಸನ್, ಇಲ್ಲಿನ "ನೀಲಂ ಬುಕ್ಸ್" ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು.
‘ನನ್ನ ದೊಡ್ಡ ಪ್ರತಿಸ್ಪರ್ಧಿ ಹಾಗೂ ರಾಜಕೀಯ ಪ್ರತಿಸ್ಪರ್ಧಿ ಎರಡೂ ಜಾತಿಯೇ ಆಗಿದೆ. ನಾನು 21 ವರ್ಷ ವಯಸ್ಸಿನಿಂದಲೂ ಇದನ್ನು ಹೇಳುತ್ತಿದ್ದೇನೆ. ನಾನು ಈಗಲೂ ಹೇಳುತ್ತಿದ್ದೇನೆ, ನನ್ನ ಅಭಿಪ್ರಾಯವು ಎಂದಿಗೂ ಬದಲಾಗಿಲ್ಲ’ ಎಂದು ಕಮಲ್ ಹೇಳಿದ್ದಾರೆ.
‘ಚಕ್ರದ ನಂತರ ಮಾನವ ಮಾಡಿದ ಅತಿದೊಡ್ಡ ಆವಿಷ್ಕಾರ ದೇವರು. ಆದರೆ, ನಮ್ಮದೇ ಸೃಷ್ಟಿಯು ಒಂದು ವೇಳೆ ನಮ್ಮ ಮೇಲೆಯೇ ದಾಳಿ ಮಾಡಿದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ.
ನಿರ್ದೇಶಕ ರಂಜಿತ್ ಅವರು ಮಾತನಾಡಿ, ನೀಲಂ ಪುಸ್ತಕ ಮಳಿಗೆಯನ್ನು ಸ್ಥಾಪಿಸಿದ ಉದ್ದೇಶ ರಾಜಕೀಯವನ್ನು ಅರ್ಥಮಾಡಿಕೊಳ್ಳುವ ಪುಸ್ತಕಗಳನ್ನು ಹೊರತರುವುದಾಗಿದೆ ಎಂದು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.