ಮಂಗಳವಾರ, ಮಾರ್ಚ್ 9, 2021
31 °C
ಬಹುಕೋಟಿ ಬ್ಯಾಂಕ್ ವಂಚನೆ ಪ್ರಕರಣ ಪ್ರಮುಖ ಆರೋಪಿ

ಲಂಚದ ಆರೋಪ: ಗೋಕುಲ್‌ನಾಥ್ ವಿರುದ್ಧ ಸಿಬಿಐ ಪ್ರಕರಣ ದಾಖಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬ್ಯಾಂಕ್ ಗ್ಯಾರಂಟಿ ವ್ಯವಸ್ಥೆ ಮಾಡಿಕೊಡಲು ಕಂಪನಿಯೊಂದರಿಂದ ಲಂಚ ಪಡೆದ ಆರೋಪದ ಅಡಿ, ಬಹುಕೋಟಿ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ನಿವೃತ್ತ ಉಪ ವ್ಯವಸ್ಥಾಪಕ ಗೋಕುಲ್‌ನಾಥ್ ಶೆಟ್ಟಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

ಗೀಜಾಂಲಿ ಜಮ್ಸ್‌ ಕಂಪನಿಗೆ ಬ್ಯಾಂಕ್ ಗ್ಯಾರಂಟಿ ವ್ಯವಸ್ಥೆ ಮಾಡಲು ರಿಷಿಕಾ ಫೈನಾನ್ಷಿಯಲ್ಸ್‌ನಿಂದ ₹1.08 ಕೋಟಿ ಲಂಚ ಪಡೆದಿದ್ದರು ಎಂಬ ಆರೋಪ ಶೆಟ್ಟಿ ಮೇಲಿತ್ತು.

ಶೆಟ್ಟಿ ಅವರು ವಿದೇಶಿ ಧನ ಸಹಾಯ ನಿಡುವ ಬ್ಯಾಂಕ್‌ಗಳಿಂದ ಕಂಪನಿಗಳಿಗೆ ಕೋಟ್ಸ್ ಆಫ್‌ ಲೆಟರ್ಸ್‌ ಅಂಡರ್‌ ಟೇಕಿಂಗ್‌(ಎಲ್ಒಯು) ವ್ಯವಸ್ಥೆ ಮಾಡಿಕೊಡುವ ವ್ಯವಹಾರ ನಡೆಸುತ್ತಿದ್ದರು ಎಂದು ರಿಷಿಕಾ ಫೈನಾನ್ಷಿಯಲ್ಸ್‌ನ ದೇವಜ್ಯೋತಿ ದತ್ತಾ ಆರೋಪಿಸಿದ್ದಾರೆ.

ದತ್ತಾ ಅವರಿಂದ ಖಚಿತ ಮಾಹಿತಿ ಪಡೆದ ನಂತರ ಶೆಟ್ಟಿ ಅವರು ಅಂತರಾಷ್ಟ್ರೀಯ ಬ್ಯಾಂಕಿಂಗ್ ಮೆಸೇಜಿಂಗ್ ಸರ್ವೀಸ್ ಬಳಸಿ ಎಲ್‌ಒಯುಗಳನ್ನು ಕೊಡಿಸುತ್ತಿದ್ದರು ಎಂದು ತಿಳಿದುಬಂದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು