ಶನಿವಾರ, ಮಾರ್ಚ್ 25, 2023
23 °C
ಕೇರಳದಲ್ಲಿ ಆದಾಯ ತೆರಿಗೆ ವಂಚನೆ ಪ್ರಕರಣ

ಆದಾಯ ತೆರಿಗೆ ವಂಚನೆ: ನೌಕಾಪಡೆ ಸಿಬ್ಬಂದಿ ಸೇರಿ 31 ಮಂದಿ ವಿರುದ್ಧ CBI ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಫಾರ್ಮ್-16ರಲ್ಲಿ ಸೇರಿಸದ ವಿವಿಧ ಕಡಿತಗಳ ಕುರಿತು ಸುಳ್ಳು ಮಾಹಿತಿ ನೀಡುವ ಮೂಲಕ ₹ 44 ಲಕ್ಷಕ್ಕೂ ಹೆಚ್ಚು ಆದಾಯ ತೆರಿಗೆ ಮರುಪಾವತಿ ಕ್ಲೈಮ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನೌಕಾಪಡೆ 18 ಸಿಬ್ಬಂದಿ ಸೇರಿದಂತೆ ಕೇರಳ ಮೂಲದ 31 ಜನರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ನಕಲಿ ಕ್ಲೈಮ್‌ಗಳನ್ನು ಮಾಡಲು ಏಜೆಂಟರ ಸೇವೆ ಬಳಸಿದ ಆರೋಪದ ಮೇಲೆ ನೌಕಾಪಡೆ, ಪೊಲೀಸ್ ಸಿಬ್ಬಂದಿ ಮತ್ತು ಎರಡು ಖಾಸಗಿ ಕಂಪನಿಗಳ ಕಾರ್ಯನಿರ್ವಾಹಕರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ಅವರು ಹೇಳಿದರು.

ಏಜೆಂಟರು ಆದಾಯ ತೆರಿಗೆ ಮರುಪಾವತಿಯ ಶೇಕಡ 10ರಷ್ಟು ಶುಲ್ಕ ವಿಧಿಸುತ್ತಿದ್ದರು ಎಂದು ತನಿಖಾ ಸಂಸ್ಥೆ ಆರೋಪಿಸಿದೆ.

ಒಟ್ಟು 51 ಜನರು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಕೇರಳದ ಪ್ರಧಾನ ಮುಖ್ಯ ಆದಾಯ ತೆರಿಗೆ ಆಯುಕ್ತರು ನೀಡಿದ ದೂರಿನ ಮೇರೆಗೆ ಸಿಬಿಐ ಈ ಕ್ರಮ ಕೈಗೊಂಡಿದೆ.

‘ಐಟಿ ಇಲಾಖೆ ನೋಟಿಸ್‌ ನೀಡಿದ ನಂತರ 51 ತೆರಿಗೆದಾರರ ಪೈಕಿ 20 ಮಂದಿ ತಪ್ಪು ಮಾಡಿರುವುದನ್ನು ಒಪ್ಪಿಕೊಂಡು ₹14.62 ಲಕ್ಷಗಳನ್ನು ಆದಾಯ ತೆರಿಗೆ ಇಲಾಖೆಗೆ ಮರುಪಾವತಿ ಮಾಡಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. 

ಎಫ್ಐಆರ್‌ನಲ್ಲಿ ದಾಖಲಾದ ಉಳಿದ 31 ಜನರು ಒಟ್ಟು ₹44.07 ಲಕ್ಷ ಆದಾಯ ತೆರಿಗೆ ಮರುಪಾವತಿಯನ್ನು ಆದಾಯ ತೆರಿಗೆ ಇಲಾಖೆಗೆ ಇನ್ನೂ ಹಿಂದಿರುಗಿಸಿಲ್ಲ ಎಂದು ಸಿಬಿಐ ಆರೋಪಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು