ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಆರೋಪ: ಐಆರ್‌ಟಿಎಸ್‌ನ ಮೂವರು ಅಧಿಕಾರಿಗಳನ್ನು ಬಂಧಿಸಿದ ಸಿಬಿಐ

Last Updated 1 ಆಗಸ್ಟ್ 2022, 16:39 IST
ಅಕ್ಷರ ಗಾತ್ರ

ನವದೆಹಲಿ: ಸರಕು ತುಂಬುವುದಕ್ಕಾಗಿ ರೈಲ್ವೆ ಬೋಗಿಗಳನ್ನು ಆದ್ಯತೆ ಮೇಲೆ ಹಂಚಿಕೆ ಮಾಡಲು ಖಾಸಗಿ ಕಂಪನಿಯವರಿಂದ ಲಂಚ ಪಡೆಯುತ್ತಿದ್ದ ಆರೋಪದಡಿಭಾರತೀಯ ರೈಲ್ವೆ ಸಂಚಾರ ಸೇವೆಯ (ಐಆರ್‌ಟಿಎಸ್‌) ಮೂವರು ಅಧಿಕಾರಿಗಳು ಸೇರಿ ಒಟ್ಟು ಐವರನ್ನು ಸಿಬಿಐ ಅಧಿಕಾರಿಗಳು ಸೋಮವಾರ ಬಂಧಿಸಿದ್ದು ಅವರಿಂದ ₹ 46.50 ಲಕ್ಷ ನಗದನ್ನೂ ಜಪ್ತಿ ಮಾಡಿದ್ದಾರೆ.

‘ಪೂರ್ವ ಕೇಂದ್ರೀಯ ರೈಲ್ವೆಯ (ಇಸಿಆರ್‌) ಮುಖ್ಯ ಸರಕು ಸಾಗಾಣೆ ವ್ಯವಸ್ಥಾಪಕ ಸಂಜಯ್‌ಕುಮಾರ್‌, ರೂಪೇಶ್‌ ಕುಮಾರ್‌, ಸಚಿನ್‌ ಮಿಶ್ರಾ ಬಂಧಿತ ಅಧಿಕಾರಿಗಳು. ಇವರ ಜೊತೆಗೆ ಕೋಲ್ಕತ್ತ ಮೂಲದ ಅಭಾ ಆಗ್ರೊ ಇಂಡಸ್ಟ್ರೀಸ್‌ನ ನವಲ್‌ ಲದಾ ಹಾಗೂ ಮನೋಜ್‌ಕುಮಾರ್‌ ಸಹಾ ಎಂಬಾತನನ್ನು ಬಂಧಿಸಲಾಗಿದೆ’ ಎಂದು ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT