ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್ ಕ್ರೈಂ: ಕರ್ನಾಟಕ ಸೇರಿ 115 ಕಡೆ ಸಿಬಿಐ ಶೋಧ

ಕರ್ನಾಟಕ ಸೇರಿ 8 ರಾಜ್ಯಗಳ ಪೊಲೀಸ್‌ ಪಡೆ ಭಾಗಿ
Last Updated 5 ಅಕ್ಟೋಬರ್ 2022, 12:50 IST
ಅಕ್ಷರ ಗಾತ್ರ

ನವದೆಹಲಿ: ಸೈಬರ್‌ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಕರ್ನಾಟಕ ಸೇರಿ ವಿವಿಧ ರಾಜ್ಯಗಳ 115ಕ್ಕೂ ಅಧಿಕ ಕಡೆ ಮಂಗಳವಾರ ಶೋಧ ಕಾರ್ಯಾಚರಣೆ ಕೈಗೊಂಡಿತ್ತು.ಇಂಟರ್‌ಪೋಲ್‌, ಎಫ್‌ಬಿಐ ಮತ್ತು ವಿವಿಧ ದೇಶಗಳ ಪೊಲೀಸ್‌ ಪಡೆಗಳ ಸಹಭಾಗಿತ್ವದಲ್ಲಿ ಈ ಶೋಧ ನಡೆಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

87 ಸ್ಥಳಗಳ ಮೇಲೆ ಸಿಬಿಐ ಶೋಧ ನಡೆಸಿದರೆ, 28 ಸ್ಥಳಗಳ ಮೇಲೆ ರಾಜ್ಯ ಪೊಲೀಸ್ ಪಡೆಗಳು ಶೋಧ ನಡೆಸಿವೆ. ಅಂತರ್ಜಾಲ ಬಳಕೆ ಮಾಡಿ ಹಣ ವಂಚನೆ ಮಾಡಿರುವ ಸೈಬರ್ ಅಪರಾಧಿಗಳ ವಿರುದ್ಧ 11 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಕರ್ನಾಟಕ, ದೆಹಲಿ, ಪಂಜಾಬ್‌, ರಾಜಸ್ಥಾನ, ಅಸ್ಸಾಂ, ಅಂಡಮಾನ್‌ ಮತ್ತು ನಿಕೋಬಾರ್, ಚಂಡೀಗಢ ಮತ್ತು ಹರಿಯಾಣ ರಾಜ್ಯಗಳ ಪೊಲೀಸ್‌ ಪಡೆಗಳು ಭಾಗಿಯಾಗಿದ್ದವು. ದಾಳಿ ವೇಳೆ ಕರ್ನಾಟಕದಲ್ಲಿ ಅಂದಾಜು ₹1.8 ಕೋಟಿ ನಗದು ಮತ್ತು 1.5 ಕೆ.ಜಿ ಚಿನ್ನ, ಅಂದಾಜು ₹1.89 ಕೋಟಿ ಮೌಲ್ಯ ಹಣ ಇರುವ ಬ್ಯಾಂಕ್‌ ಖಾತೆಗಳನ್ನು ಜಫ್ತಿ ಮಾಡಲಾಗಿದೆ ಎಂದು ಅದು ತಿಳಿಸಿದೆ.

ಮೊಬೈಲ್‌ಫೋನ್‌, ಲ್ಯಾಪ್‌ಟಾಪ್‌ ಸೇರಿದಂತೆ ಅಪಾರ ಪ್ರಮಾಣದ ಡಿಜಿಟಲ್‌ ಸಾಕ್ಷಿಗಳನ್ನೂ ವಶಕ್ಕೆ ಪಡೆಯಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಭಾರತದಲ್ಲಿ ಸಕ್ರಿಯವಾಗಿರುವ ಅಂತರರಾಷ್ಟ್ರೀಯ ಸೈಬರ್‌ ಅಪರಾಧ ಗುಂಪನ್ನು ಮಟ್ಟಹಾಕಲು ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.ಬಹುರಾಷ್ಟ್ರೀಯ ಸಂಘಟಿತ ಸೈಬರ್ ಅಪರಾಧ ವಿರುದ್ಧದ ಹೋರಾಟ ಮಹತ್ವದ ಮೈಲಿಗಲ್ಲು ತಲುಪಿದೆ ಎಂದು ಸಿಬಿಐ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT