ಶನಿವಾರ, ಏಪ್ರಿಲ್ 1, 2023
30 °C

ರೈಲ್ವೆ ನಿವೃತ್ತ ಅಧಿಕಾರಿಗೆ ಸೇರಿದ 17 ಕೆ.ಜಿ ಚಿನ್ನ ವಶ!

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಭುವನೇಶ್ವರದಲ್ಲಿ ರೈಲ್ವೆಯ ನಿವೃತ್ತ ಪ್ರಧಾನ ಮುಖ್ಯ ವ್ಯವಸ್ಥಾಪಕರೊಬ್ಬರಿಗೆ (ವಾಣಿಜ್ಯ) ಸಂಬಂಧಿಸಿದ ಸ್ಥಳಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿದ್ದು, 17 ಕೆ.ಜಿ ಚಿನ್ನ ಮತ್ತು ₹1.57 ಕೋಟಿ ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ನಿವೃತ್ತರಾಗಿದ್ದ 1987ರ ಬ್ಯಾಚಿನ ಭಾರತೀಯ ರೈಲ್ವೆ ಸಂಚಾರ ಸೇವಾ ಅಧಿಕಾರಿ ಪ್ರಮೋದ್ ಕುಮಾರ್ ಜೇನಾ ಅವರ ವಿರುದ್ಧ ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಜ.3ರಂದು ಪ್ರಕರಣ ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿತ್ತು.

 ‘ಈ  ವೇಳೆ ₹1.57 ಕೋಟಿ ನಗದು, ಅಂದಾಜು 8ರಿಂದ 10 ಕೋಟಿ ರೂಪಾಯಿ ಮೌಲ್ಯದ 17 ಕೆ.ಜಿ ಚಿನ್ನ, ₹2.25 ಕೋಟಿ ಮೊತ್ತದ ಬ್ಯಾಂಕ್‌ ಮತ್ತು ಅಂಚೆ ಠೇವಣಿ ರಸೀದಿಗಳು ಮತ್ತು  ಆಸ್ತಿ ದಾಖಲೆಗಳು ಲಭ್ಯವಾಗಿವೆ’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು