ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುಬಿಯಾ ಸಯೀದ್‌ಗೆ ಸಿಬಿಐ ಸಮನ್ಸ್‌

Last Updated 27 ಮೇ 2022, 11:18 IST
ಅಕ್ಷರ ಗಾತ್ರ

ಜಮ್ಮು:ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮುಫ್ತಿ ಮಹಮದ್‌ ಸಯೀದ್‌ ಅವರ ಪುತ್ರಿ ರುಬಿಯಾ ಸಯೀದ್‌ಗೆ, ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 15ರೊಳಗೆವಿಚಾರಣೆಗೆ ಹಾಜರಾಗಬೇಕೆಂದು ಸಿಬಿಐ ನ್ಯಾಯಾಲಯ ಸಮನ್ಸ್‌ ನೀಡಿದೆ.

1989ರಲ್ಲಿ ನಿಷೇಧಿತ ಜೆಕೆಎಲ್ಎಫ್‌ನ (ಜಮ್ಮು ಕಾಶ್ಮೀರ ಲಿಬರೇಷನ್‌ ಫ್ರಂಟ್‌) ನಾಯಕ ಯಾಸಿನ್‌ ಮಲ್ಲಿಕ್‌, ಐವರು ಭಯೋತ್ಪಾದಕರ ಬಿಡುಗಡೆಗಾಗಿ ರುಬಿಯಾ ಅವರನ್ನು ಅಪಹರಿಸಿದ್ದ.

1990ರ ಆರಂಭದಲ್ಲಿ ಸಿಬಿಐ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತ್ತು.ತನಿಖೆ ಆರಂಭವಾದಾಗಿನಿಂದ ವಿಚಾರಣೆಗೆ ಹಾಜರಾಗಲು ರುಬಿಯಾ ಅವರಿಗೆ ಸೂಚಿಸಿರುವುದು ಇದೇ ಮೊದಲು. ಸದ್ಯ ರುಬಿಯಾ ತಮಿಳುನಾಡಿನಲ್ಲಿ ವಾಸವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT