ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿದ್ದಲು ಕಳ್ಳತನ ಪ್ರಕರಣ: ಟಿಎಂಸಿ ಶಾಸಕನಿಗೆ ಸಿಬಿಐ ಸಮನ್ಸ್‌

Last Updated 15 ಜೂನ್ 2022, 14:12 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಬಂಗಾಳದ ಈಸ್ಟರ್ನ್ ಕೋಲ್‌ಫೀಲ್ಡ್ಸ್‌ ಲಿಮಿಟೆಡ್‌ನ (ಇಸಿಎಲ್‌) ಗಣಿಗಳಲ್ಲಿನ ಕಲ್ಲಿದ್ದಲು ಕಳ್ಳತನ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ)ಕ್ಯಾನಿಂಗ್‌ ಪುರ್ಬಾ ಶಾಸಕ ಸೌಕತ್‌ ಮೊಲ್ಲಾ ಅವರಿಗೆ ಸಿಬಿಐ ಸಮನ್ಸ್‌ ನೀಡಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.

ಕಲ್ಲಿದ್ದಲು ಕಳ್ಳತನ ಮತ್ತು ಪಾವತಿಗೆ ಸಂಬಂಧಿಸಿದ ವಿಚಾರಣೆಗಾಗಿ ಕೋಲ್ಕತ್ತದ ಕಚೇರಿಗೆ ಬುಧವಾರ ಹಾಜರಾಗಲು ಸೌಕತ್‌ ಅವರಿಗೆ ಸಿಬಿಐ ತಿಳಿಸಿದೆ ಎಂದು ಅವರು ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಬಿಐ ತಂಡವು, ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರ ಪತ್ನಿ ರುಜಿರಾ ಬ್ಯಾನರ್ಜಿ ಅವರನ್ನು ಮಂಗಳವಾರ ಎರಡನೇ ಬಾರಿಗೆ ವಿಚಾರಣೆಗೊಳಪಡಿಸಿತ್ತು. ರುಜಿರಾ ಅವರನ್ನು ಸಿಬಿಐ ತಂಡವು 2021ರ ಫೆಬ್ರುವರಿಯಲ್ಲಿ ವಿಚಾರಣೆ ನಡೆಸಿತ್ತು.

ಇನ್ನು ಕಲ್ಲಿದ್ದಲು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೂಪ್‌ ಮಾಂಝಿ (ಲಾಲಾ), ಇಸಿಎಲ್‌ನಪ್ರಧಾನ ವ್ಯವಸ್ಥಾಪಕರಾದ ಅಮಿತ್‌ ಕುಮಾರ್‌ ಧಾರ್ ಮತ್ತು ಜಯೇಶ್‌ ಚಂದ್ರ ಜೈನ್‌ 2020ರ ನವೆಂಬರ್‌ನಲ್ಲಿ, ಇಸಿಎಲ್‌ನ ಭದ್ರತಾ ಮುಖ್ಯಸ್ಥ ತನ್ಮಯ್‌ ದಾಸ್‌, ಕುನುಸ್ತೋರಿಯಾದ ಭದ್ರತಾ ಇನ್ಸ್‌ಪೆಕ್ಟರ್‌ ಧನಂಜಯ್‌ ರೈ ಹಾಗೂ ಕಿಜೊರಿಯಾದ ಉಸ್ತುವಾರಿ ಭದ್ರತಾ ಅಧಿಕಾರಿ ದೇಬಾಶಿಶ್‌ ಮುಖರ್ಜಿ ಅವರ ವಿರುದ್ಧ 2020ರ ನವೆಂಬರ್‌ನಲ್ಲಿ ಸಿಬಿಐ ಎಫ್‌ಐಆರ್‌ ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT