ಮಂಗಳವಾರ, ಸೆಪ್ಟೆಂಬರ್ 29, 2020
22 °C

‘ಮೇಕ್‌ ಇನ್ ಇಂಡಿಯಾ’ಗೆ ಸಶಸ್ತ್ರ ಪಡೆಗಳು ಬದ್ಧವಾಗಿವೆ: ಬಿಪಿನ್ ರಾವತ್

ಎಎನ್‌ಐ‌ Updated:

ಅಕ್ಷರ ಗಾತ್ರ : | |

Bipin Rawat

ನವದೆಹಲಿ: ಭಾರತದಲ್ಲೇ ತಯಾರಿಸಿ (ಮೇಕ್ ಇನ್ ಇಂಡಿಯಾ) ಅಭಿಯಾನದ ವಿಚಾರದಲ್ಲಿ ಭಾರತ ಸರ್ಕಾರ ಮತ್ತು ಸಶಸ್ತ್ರ ಪಡೆಗಳು ಬದ್ಧತೆ ಹಾಗೂ ಸಂಕಲ್ಪ ಮೆರೆದಿವೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಜ. ಬಿಪಿನ್‌ ರಾವತ್‌ ಹೇಳಿದ್ದಾರೆ.

‘ದೇಶದ ರಕ್ಷಣಾ ಕ್ಷೇತ್ರವಿಂದು ಟೇಕಾಫ್ ಆಗುವ ಹಂತದಲ್ಲಿದೆ. ಸರ್ಕಾರ ಮತ್ತು ಸಶಸ್ತ್ರ ಪಡೆಗಳು ಮೇಕ್‌ ಇನ್ ಇಂಡಿಯಾದೆಡೆಗಿನ ಬದ್ಧತೆ ಪ್ರದರ್ಶಿಸಿವೆ. ಭಾರತೀಯ ಪರಿಹಾರಗಳೊಂದಿಗೆ ದೇಶದ ಯುದ್ಧಗಳನ್ನು ಗೆಲ್ಲಲು ನಾವು ಬದ್ಧರಾಗಿದ್ದೇವೆ’ ಎಂದು ರಕ್ಷಣಾ ರಫ್ತಿಗೆ ಸಂಬಂಧಿಸಿದ ವಿಚಾರ ಸಂಕಿರಣವೊಂದರಲ್ಲಿ ಅವರು ಹೇಳಿದ್ದಾರೆ.

‘ಬಹು ಆಯಾಮದ ತಂತ್ರಜ್ಞಾನದ ಈ ಯುಗದಲ್ಲಿ, ವಿರೋಧಿಗಳಿಗಿಂತ ಮುಂದಿರಲು ನಾವು ನಿರಂತರ ಆವಿಷ್ಕಾರಗಳು ಮತ್ತು ಆಧುನಿಕ ತಾಂತ್ರಿಕ ಪರಿಹಾರಗಳತ್ತ ಗಮನ ಹರಿಸಬೇಕಿದೆ ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: 

‘ಸೇನಾ ವ್ಯವಹಾರಗಳ ಇಲಾಖೆ (ಡಿಎಂಎ) ಸ್ಥಾಪನೆಯಿಂದ ಸೇನೆಗೂ ಕೇಂದ್ರ ಸರ್ಕಾರದ ಕಟ್ಟಡದಲ್ಲಿ ಪ್ರಮುಖ ಸ್ಥಾನ ದೊರೆತಂತಾಗಿದೆ. ರಕ್ಷಣಾ ಸಚಿವಾಲಯದ ಪುನಾರಚನೆ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳಲು ಅವಕಾಶ ನೀಡಲಿದೆ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು