ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಗಣತಿ, ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತಷ್ಟು ವಿಳಂಬ ಸಾಧ್ಯತೆ

Last Updated 30 ಆಗಸ್ಟ್ 2020, 12:12 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಪಿಡುಗಿನಿಂದ ಮುಂದೂಡಲ್ಪಟ್ಟಿದ್ದ ಮೊದಲ ಹಂತದ ಜನಗಣತಿ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಪಿಆರ್‌) ಪ್ರಕ್ರಿಯೆ, ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಪ್ರಸಕ್ತ ವರ್ಷದಲ್ಲಿ ಈ ಪ್ರಕ್ರಿಯೆಯ ಮೊದಲ ಹಂತವನ್ನು ಆರಂಭಿಸಲು ಉದ್ದೇಶಿಸಲಾಗಿತ್ತು. ಭಾರತದಲ್ಲಿ ದಿನೇ ದಿನೇ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ, ಇನ್ನೂ ಕನಿಷ್ಠ ಒಂದು ವರ್ಷ ಈ ಪ್ರಕ್ರಿಯೆಯನ್ನು ಮುಂಡೂಡುವ ಸಾಧ್ಯತೆ ಇದೆ. ಭಾರತದಲ್ಲಿ ನಡೆಯುವ ಜನಗಣತಿಯು ವಿಶ್ವದಲ್ಲೇ ಅತಿ ದೊಡ್ಡ ಆಡಳಿತಾತ್ಮಕ ಕಾರ್ಯಾಚರಣೆಯಾಗಿದೆ. ಇದರಲ್ಲಿ 30 ಲಕ್ಷಕ್ಕೂ ಅಧಿಕ ಸಿಬ್ಬಂದಿಯು ದೇಶದ ಮೂಲೆಮೂಲೆಯಲ್ಲಿರುವ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಾರೆ.

‘ಪಿಡುಗಿನ ಈ ಸಂದರ್ಭದಲ್ಲಿ ಜನಗಣತಿ ಅತ್ಯಾವಶ್ಯಕವಾದ ಕೆಲಸವಲ್ಲ. ಈ ಪ್ರಕ್ರಿಯೆ ಒಂದು ವರ್ಷ ವಿಳಂಬವಾದರೂ, ಯಾವುದೇ ಸಮಸ್ಯೆ ಆಗುವುದಿಲ್ಲ. 2021ರ ಜನಗಣತಿಯ ಹಾಗೂ ಎನ್‌ಪಿಆರ್‌ನ ಮೊದಲ ಹಂತವನ್ನು ಯಾವಾಗ ಪ್ರಾರಂಭಿಸಬೇಕು ಎಂದು ಇಲ್ಲಿಯವರೆಗೂ ಯಾವುದೇ ಅಂತಿಮ ನಿರ್ಧಾರವಾಗಿಲ್ಲ. 2020ರಲ್ಲಿ ಈ ಪ್ರಕ್ರಿಯೆ ಆರಂಭಿಸುವುದು ಬಹುತೇಕ ಅನುಮಾನ.ಲಕ್ಷಾಂತರ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಬೇಕಿರುವುದರಿಂದ, ಜನರು ಹಾಗೂ ಅಧಿಕಾರಿಗಳ ಆರೋಗ್ಯವನ್ನು ಅಪಾಯಕ್ಕೆ ದೂಡಲು ಸಾಧ್ಯವಿಲ್ಲ’ಎಂದು ಅಧಿಕಾರಿಯೊಬ್ಬರು ಹೇಳಿದರು.

ಮುಖ್ಯಾಂಶಗಳು

ಏ.1ರಿಂದ ಸೆ.30ರವರೆಗೆ ನಿಗದಿಯಾಗಿದ್ದ ಮೊದಲ ಹಂತದ ಜನಗಣತಿ, ಎನ್‌ಪಿಆರ್‌ ಪ್ರಕ್ರಿಯೆ

ಕೋವಿಡ್‌–19 ಪಿಡುಗಿನ ಕಾರಣಕ್ಕೆ ಮುಂದೂಡಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT