ಗುರುವಾರ , ಡಿಸೆಂಬರ್ 1, 2022
20 °C

1,032 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಅಕ್ರಮ ಗಾಂಜಾ ಬೆಳೆ ನಾಶ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ:  ಹಿಮಾಚಲ ಪ್ರದೇಶದಲ್ಲಿ 1,032 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ  ಅಕ್ರಮ ಗಾಂಜಾವನ್ನು ಕೇಂದ್ರ ಮಾದಕ ದ್ರವ್ಯ ದಳ (ಸಿಬಿಎನ್‌)ದ ಅಧಿಕಾರಿಗಳು ಇತ್ತೀಚೆಗೆ ನಾಶಪಡಿಸಿದ್ದಾರೆ. 

ನಿಖರ ಮಾಹಿತಿ ಮೇರೆಗೆ, ತಂತ್ರಗಾರಿಕೆ ರೂಪಿಸಿ, ಸಾಕಷ್ಟು ಅಧ್ಯಯನ ನಡೆಸಿ ಎರಡು ವಾರಗಳ ಕಾಲ ಈ ಕಾರ್ಯಾಚರಣೆ ನಡೆಸಲಾಗಿದೆ. ಹೀಗಾಗಿ ಇದು ಮಾದಕ ದ್ರವ್ಯದ ವಿರುದ್ಧದ ಅತಿದೊಡ್ಡ ಕಾರ್ಯಾಚರಣೆ ಎಂದು ಸ್ವತಃ ಸಿಬಿಎನ್‌ ಹೇಳಿದೆ. 

ಎರಡು ವಾರಗಳ ಕಾಲ ನಡೆದ ಕಾರ್ಯಾಚರಣೆಯ ವೇಳೆ, ಅಧಿಕಾರಿಗಳು ಸಮುದ್ರ ಮಟ್ಟದಿಂದ ಮೇಲೆ 11,000 ಅಡಿಗಳವರೆಗೆ ಪ್ರತಿದಿನ ಘಟ್ಟ ಪ್ರದೇಶ, ಸೂಕ್ಷ್ಮ ಪ್ರದೇಶಗಳಲ್ಲಿ ಕ್ಯಾಂಪ್ ಹಾಕುತ್ತಿದ್ದರು ಎಂದು ‘ಪ್ರೆಸ್‌ ಇನ್ಫರ್ಮೇಷನ್‌ ಬ್ಯೂರೋ’ ಹೇಳಿದೆ. 

ಗಾಂಜಾ ಪತ್ತೆ ಮತ್ತು ಕಣ್ಗಾವಲಿಗಾಗಿ ಡ್ರೋನ್‌ಗಳನ್ನು ಬಳಸಲಾಗಿದೆ ಎಂದು ವರದಿಯಾಗಿದೆ. ಗಾಂಜಾ ಬೆಳೆ ನಾಶ ಮಾಡಲು ಸಿಎನ್‌ಬಿ ಮೊದಲಿಗೆ ಸ್ಥಳೀಯ ಗ್ರಾಮಗಳಲ್ಲಿ ಜಾಗೃತಿ ಕೈಗೊಂಡಿದ್ದರು. ಬೆಳೆ ನಾಶದ ವೇಳೆ ಗ್ರಾಮಸ್ಥರೂ ಅಧಿಕಾರಿಗಳೊಂದಿಗೆ ಸಹರಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು