ಶುಕ್ರವಾರ, ಅಕ್ಟೋಬರ್ 30, 2020
27 °C
ಅನ್‌ಲಾಕ್‌ 5.0: ಅ.15ರಿಂದ ಚಿತ್ರಮಂದಿರ ತೆರೆಯಲು ಅವಕಾಶ: ಹೊಸ ಮಾರ್ಗಸೂಚಿ ಬಿಡುಗಡೆ

ಶಾಲೆ ಆರಂಭ: ರಾಜ್ಯ ಸರ್ಕಾರಗಳ ವಿವೇಚನೆಗೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಗೃಹ ಸಚಿವಾಲಯವು ಕೋವಿಡ್–19‌ ‘ಅನ್‌ಲಾಕ್‌ –5’ ಮಾರ್ಗಸೂಚಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಚಿತ್ರಮಂದಿ‌ರಗಳು ಹಾಗೂ ಮಲ್ಟಿಫ್ಲೆಕ್ಸ್‌ಗಳ ಪುನರಾರಂಭ ಸೇರಿದಂತೆ ಮತ್ತಷ್ಟು ಚಟುವಟಿಕೆಗಳಿಗೆ ಅನುಮತಿ ನೀಡಿದೆ.

ಕಂಟೈನ್‌ಮೆಂಟ್‌ ವಲಯಗಳನ್ನು ಹೊರತುಪಡಿಸಿ ಉಳಿದೆಡೆ ಅಕ್ಟೋಬರ್‌ 15ರಿಂದ ಚಿತ್ರಮಂದಿರಗಳನ್ನು ತೆರೆಯಬಹುದು. ಚಿತ್ರಮಂದಿರದ ಒಟ್ಟು ಆಸನ ಸಾಮರ್ಥ್ಯದ ಶೇಕಡ 50ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಬೇಕು ಎಂದು ಸೂಚಿಸಲಾಗಿದೆ.

ಅಕ್ಟೋಬರ್ 15ರ ನಂತರ ಪರಿಸ್ಥಿತಿ ಅವಲೋಕಿಸಿಕೊಂಡು ಶಾಲೆ ಹಾಗೂ ಕೋಚಿಂಗ್‌ ಇನ್‌ಸ್ಟಿಟ್ಯೂಟ್‌ಗಳನ್ನು ಪುನರಾರಂಭಿಸುವ ಬಗ್ಗೆ ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಲಾಗಿದೆ.  

* ಕೇಂದ್ರ ಸರ್ಕಾರದ ಅನುಮತಿ ಪಡೆದಿರುವವರನ್ನು ಬಿಟ್ಟು ಉಳಿದ ನಾಗರಿಕರ ವಿದೇಶಿ ಪ್ರಯಾಣದ ಮೇಲಿನ ನಿರ್ಬಂಧ ಮುಂದುವರಿಕೆ.

* ಕ್ರೀಡಾಪಟುಗಳ ತರಬೇತಿಗಾಗಿ ಬಳಸುವ ಈಜುಕೊಳಗಳನ್ನು ಆರಂಭಿಸಲು ಅವಕಾಶ ನೀಡಲಾಗಿದ್ದು, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯದ ಎಸ್‌ಒಪಿಯನ್ನು ಕಡ್ಡಾಯವಾಗಿ ಪಾಲಿಸಬೇಕು.

* ಮನರಂಜನಾ ಪಾರ್ಕ್‌ಗಳ ಆರಂಭಕ್ಕೂ ಅವಕಾಶ. ಇದಕ್ಕೂ ಪ್ರತ್ಯೇಕ ಎಸ್‌ಒಪಿ ಬಿಡುಗಡೆ.   

* ‘ಬ್ಯುಸಿನೆಸ್‌ ಟು ಬ್ಯುಸಿನೆಸ್‌’ (ಬಿ2ಬಿ) ಪ್ರದರ್ಶನಕ್ಕೆ ಅನುಮತಿ. ಇದಕ್ಕೆ ವಾಣಿಜ್ಯ ಇಲಾಖೆಯು ಪ್ರತ್ಯೇಕ ಎಸ್‌ಒಪಿ ಬಿಡುಗಡೆ ಮಾಡಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು