ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ: ರೈಲ್ವೆ ಪ್ಲಾಟ್‌ಫಾರಂ ಟಿಕೆಟ್‌ ದರ 10ರಿಂದ 50ಕ್ಕೆ ಏರಿಕೆ

Last Updated 9 ಮೇ 2022, 14:46 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಬೇಸಿಗೆ ಕಾಲದಲ್ಲಿ ಮುಂಬೈನ ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿ ಹಾಗೂ ಅನಗತ್ಯವಾಗಿ ರೈಲಿನ ತುರ್ತು ಚೈನ್ ಎಳೆಯುವುದನ್ನು ನಿಯಂತ್ರಿಸಲು ಕೇಂದ್ರ ರೈಲ್ವೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್, ದಾದರ್‌ ನಿಲ್ದಾಣ, ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿಮಿನಲ್, ಠಾಣೆ, ಕಲ್ಯಾಣ ಮತ್ತು ಪಾನ್ವಲೆ ರೈಲೆ ನಿಲ್ದಾಣಗಳ ಪ್ಲಾಟ್‌ಫಾರಂ ಟಿಕೆಟ್‌ ದರವನ್ನು 10 ರಿಂದ 50ಕ್ಕೆ ಏರಿಕೆ ಮಾಡಲಾಗಿದೆ. ಇದು ಮೇ 9ರಿಂದ 23ರವರೆಗೆ ತಾತ್ಕಾಲಿಕ ಇರಲಿದೆ ಎಂದು ಸೋಮವಾರ ಕೇಂದ್ರ ರೈಲ್ವೆ ನಿಲ್ದಾಣದ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಾಜಿ ಸುತಾರ ತಿಳಿಸಿದ್ದಾರೆ.

ಮುಂಬೈ ಭಾಗದಲ್ಲಿ ಕಳೆದ ತಿಂಗಳು ಅನಗತ್ಯವಾಗಿ ರೈಲಿನ ತುರ್ತು ಚೈನ್‌ ಎಳೆದಿರುವ 332 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 53 ಪ್ರಕರಣಗಳಲ್ಲಿ ಸಕಾರಣಗಳನ್ನು ನೀಡಿದ್ದು, 279 ಪ್ರಕರಣಗಳಿಗೆ ಸರಿಯಾದ ಕಾರಣಗಳಿಲ್ಲ. ರೈಲ್ವೆ ಕಾಯ್ದೆ ಅಡಿಯಲ್ಲಿ ಒಟ್ಟು 188 ಅಪರಾಧಿಗಳನ್ನು ಬಂಧಿಸಿ ಅವರಿಂದ ₹94,000 ದಂಡ ವಸೂಲಿ ಮಾಡಲಾಗಿದೆ ಅವರುಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT