ಶುಕ್ರವಾರ, ಅಕ್ಟೋಬರ್ 23, 2020
21 °C

ಕೋವಿಡ್‌–19 ವಿರುದ್ಧ ಹೋರಾಟ: ಎಸ್‌ಡಿಆರ್‌ಎಫ್‌ ನಿಧಿ ಬಳಕೆ ಮಿತಿ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವೆಂಟಿಲೇಟರ್‌, ಕಿಟ್‌ ಖರೀದಿ ಸೇರಿದಂತೆ ಕೋವಿಡ್‌–19 ವಿರುದ್ಧ ಹೋರಾಡಲು ಮೂಲ ಸೌಲಭ್ಯಗಳನ್ನು ಸೃಷ್ಟಿಸಲು ಅಗತ್ಯವೆನಿಸಿದರೆ ರಾಜ್ಯ ವಿಪತ್ತು ಪರಿಹಾರ ನಿಧಿಯ (ಎಸ್‌ಡಿಆರ್‌ಎಫ್‌) ಗರಿಷ್ಠ ಶೇ 50ರಷ್ಟು ಹಣವನ್ನು ಬಳಸಲು ಕೇಂದ್ರ ಸರ್ಕಾರವು ಗುರುವಾರ ರಾಜ್ಯ ಸರ್ಕಾರಗಳಿಗೆ ಅನುಮತಿನೀಡಿದೆ.

ಕೋವಿಡ್‌ನಿಂದ ಅತಿ ಹೆಚ್ಚು ಬಾಧಿತವಾಗಿರುವ ಏಳು ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಬುಧವಾರ ವಿಡಿಯೊ ಸಂವಾದ ನಡೆಸಿದ್ದ ಪ್ರಧಾನಿ ಮೋದಿ ಅವರು, ‘ಎಸ್‌ಡಿಆರ್‌ಎಫ್‌’ ನಿಧಿಯ ಬಳಕೆಯ ಪ್ರಮಾಣವನ್ನು ಹೆಚ್ಚಿಸುವುದಾಗಿ ಹೇಳಿದ್ದರು. ಗುರುವಾರ ಕೇಂದ್ರದ ಗೃಹ ಸಚಿವಾಲಯವು ಈ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಕಳುಹಿಸಿದೆ.

ಕ್ವಾರಂಟೈನ್‌ ವ್ತವಸ್ಥೆ ನಿರ್ಮಿಸುವುದು, ಮಾದರಿ ಸಂಗ್ರಹ ಮತ್ತು ತಪಾಸಣೆ ಮುಂತಾದ ಕೆಲಸಗಳಿಗಾಗಿ ಈ ನಧಿಯನ್ನು ಬಳಸಬಹುದು. ಯಾವುದಕ್ಕೆ ಎಷ್ಟು ವೆಚ್ಚ ಮಾಡಬಹುದು ಎಂಬ ಗರಿಷ್ಠ ಪ್ರಮಾಣವನ್ನೂ ಕೇಂದ್ರವು ನಿಗದಿ ಮಾಡಿದೆ. ಅದಕ್ಕಿಂತ ಹೆಚ್ಚಿನ ಮೊತ್ತವನ್ನು ವೆಚ್ಚ ಮಾಡಿದರೆ ಹೆಚ್ಚುವರಿ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು