ಹೆಚ್ಚಿದ ತಾಪ: ಆರೋಗ್ಯ ಸೌಲಭ್ಯ ಸಿದ್ಧತೆ ಪರಿಶೀಲನೆಗೆ ರಾಜ್ಯಗಳಿಗೆ ಕೇಂದ್ರ ಸೂಚನೆ

ನವದೆಹಲಿ: ದೇಶದಾದ್ಯಂತ ತಾಪ ಮತ್ತು ಬಿಸಿಗಾಳಿ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಬೆನ್ನಲ್ಲೇ, ಆರೋಗ್ಯ ಸೌಲಭ್ಯದ ಬಗ್ಗೆ ಪರಿಶೀಲಿಸಿಕೊಳ್ಳುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಈ ಸಂಬಂಧ ಶನಿವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, ತಾಪಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಹೇಗೆ ನಿಯಂತ್ರಿಸಬೇಕು ಎಂಬ ಕುರಿತಾದ ರಾಷ್ಟ್ರೀಯ ಕಾರ್ಯ ಯೋಜನೆಯ ಮಾರ್ಗಸೂಚಿಗಳ ಮಾಹಿತಿಯನ್ನು ಜಿಲ್ಲೆಗಳ ಜೊತೆ ಹಂಚಿಕೊಳ್ಳುವಂತೆ ಸೂಚಿಸಿದ್ದಾರೆ.
ಸೂರ್ಯನ ಪ್ರತಾಪ: ಬಿಸಿಗಾಳಿಗೆ ಬಸವಳಿದ ದೆಹಲಿ
ಏಕಾಂಗಿಯಾಗಿರುವ ಹಿರಿಯ ನಾಗರಿಕರು ಅಥವಾ ಕಾಯಿಲೆ ಪೀಡಿತರ ಆರೋಗ್ಯದ ಮೇಲೆ ಪ್ರತಿನಿತ್ಯ ನಿಗಾ ವಹಿಸಬೇಕು. ಅಲ್ಲದೆ, ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಮಾತ್ರೆಗಳು, ಕುಡಿಯುವ ನೀರು ಮತ್ತು ಅತಿಹೆಚ್ಚು ತಾಪ ಇರುವ ಪ್ರದೇಶಗಳಲ್ಲಿ ಕೂಲಿಂಗ್ ಸಾಧನಗಳು ನಿರಂತರವಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು ಕ್ರಮ ವಹಿಸುವಂತೆಯೂ ಸೂಚಿಸಲಾಗಿದೆ. ಮುಂದಿನ 3-4 ದಿನಗಳ ದೈನಂದಿನ ತಾಪಮಾನದ ಬಗ್ಗೆ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮತ್ತು ಎನ್‌ಸಿಡಿಸಿ ನೀಡಿರುವ ಎಚ್ಚರಿಕೆಗಳನ್ನು ರಾಜ್ಯಗಳ ಜೊತೆ ಹಂಚಿಕೊಳ್ಳಲಾಗಿದೆ ಎಂದು ಭೂಷಣ್ ಅವರು ಹೇಳಿದ್ದಾರೆ.
ವಾಯುವ್ಯ, ಮಧ್ಯ ಭಾರತದಲ್ಲಿ 122 ವರ್ಷಗಳಲ್ಲೇ ಬಿರುಬೇಸಿಗೆಯ ಏಪ್ರಿಲ್: ಐಎಂಡಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.