ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟೇ ತಿಂಗಳಲ್ಲಿ ಕೇಂದ್ರ ಸರ್ಕಾರಕ್ಕೆ ಭ್ರಷ್ಟಾಚಾರ ದೂರು ಬಂದಿದ್ದೆಷ್ಟು ಗೊತ್ತಾ?

Last Updated 22 ಸೆಪ್ಟೆಂಬರ್ 2022, 13:17 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ಎಂಟು ತಿಂಗಳಲ್ಲಿ 46 ಸಾವಿರಕ್ಕೂ ಹೆಚ್ಚು ಭ್ರಷ್ಟಾಚಾರ ಸಂಬಂಧಿತ ಸಾರ್ವಜನಿಕ ಕುಂದುಕೊರತೆ ದೂರುಗಳನ್ನು ಕೇಂದ್ರ ಸರ್ಕಾರ ಸ್ವೀಕರಿಸಿದೆ. ಇದರಲ್ಲಿ ಹಣಕಾಸು ಸೇವೆಗಳ ಇಲಾಖೆ ವಿರುದ್ಧ ( ಡಿಎಫ್‌ಎಸ್‌) ಬಂದಿರುವ ದೂರುಗಳೇ ಹೆಚ್ಚು ಎಂದು ಇತ್ತೀಚಿನ ಅಧಿಕೃತ ವರದಿ ಹೇಳಿದೆ.

‘ಹಣಕಾಸು ಸೇವೆಗಳ ಇಲಾಖೆಯ ಬ್ಯಾಂಕಿಂಗ್ ವಿಭಾಗದ ವಿರುದ್ಧ ಗರಿಷ್ಠ ಸಂಖ್ಯೆಯಲ್ಲಿ ಭ್ರಷ್ಟಾಚಾರ ಸಂಬಂಧಿ ದೂರುಗಳು ಬಂದಿವೆ. ಈ ವಿಭಾಗದ ವಿರುದ್ಧ 14,934 ದೂರುಗಳು ಈ ವರ್ಷ ದಾಖಲಾಗಿವೆ. ಇನ್ನು ವಿಮಾ ವಿಭಾಗದ ವಿರುದ್ಧ ಈ ವರ್ಷ 3,306 ದೂರುಗಳು, ಸಿಬ್ಬಂದಿ ಮತ್ತು ತರಬೇತಿ ಇಲಾಖೆ ವಿರುದ್ಧ 2,223 ದೂರುಗಳು ಸ್ವೀಕೃತವಾಗಿವೆ’ ಎಂದು ವರದಿ ಹೇಳಿದೆ.

ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರದ ವಿರುದ್ಧ ನಾಗರಿಕರು ಆನ್‌ಲೈನ್‌ ಮೂಲಕ ದೂರು ಸಲ್ಲಿಸಲುಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ನಿಗಾ ವ್ಯವಸ್ಥೆಯ (ಸಿಪಿಜಿಆರ್‌ಎಎಂಎಸ್‌) ಪೋರ್ಟಲ್‌ ಮೂಲಕ ಅವಕಾಶ ಕಲ್ಪಿಸಲಾಗಿದೆ. ಭ್ರಷ್ಟಾಚಾರ ವಿಷಯವೊಂದರಲ್ಲೇ ಈ ವರ್ಷ 46,627 ದೂರುಗಳು ಸ್ವೀಕಾರವಾಗಿವೆ. ಕಳೆದ ಐದು ವರ್ಷಗಳಲ್ಲಿ ಒಟ್ಟು 19 ಲಕ್ಷ ದೂರುಗಳು ಸ್ವೀಕೃತವಾಗಿವೆ. ದೂರು ವಿಲೇವಾರಿಗೆ ವಿಧಿಸಿದ್ದ 45 ದಿನಗಳ ಗಡುವನ್ನು 30 ದಿನಗಳಿಗೆ ತಗ್ಗಿಸಲಾಗಿದೆ’ಎಂದು ಸಿಪಿಜಿಆರ್‌ಎಎಂಎಸ್‌ನ2022ರಆಗಸ್ಟ್‌ ವರದಿಯಲ್ಲಿ ತಿಳಿಸಲಾಗಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT