ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ವೇಳೆ ₹ 38 ಲಕ್ಷ ವೆಚ್ಚ: ಕೇಂದ್ರ ಸರ್ಕಾರ

Last Updated 18 ಆಗಸ್ಟ್ 2022, 10:13 IST
ಅಕ್ಷರ ಗಾತ್ರ

ನವದೆಹಲಿ: 2020ರಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ. ಅವರ 36 ಗಂಟೆಗಳ ಪ್ರವಾಸಕ್ಕೆ ₹ 38 ಕ್ಷ ವೆಚ್ಚ ಮಾಡಲಾಗಿದೆ.

ಡೊನಾಲ್ಡ್ ಟ್ರಂಪ್ ಅವರವಾಸ್ತವ್ಯ, ಊಟ, ಪ್ರಯಾಣ ಸೇರಿದಂತೆ ಮತ್ತಿತರ ಸೌಕರ್ಯಕ್ಕಾಗಿ₹ 38 ಲಕ್ಷ ವೆಚ್ಚ ಮಾಡಿರುವುದಾಗಿವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೇಂದ್ರ ಮಾಹಿತಿ ಆಯೋಗಕ್ಕೆ ತಿಳಿಸಿದೆ.

2020ರಲ್ಲಿ ಫೆಬ್ರುವರಿ 24–25ರಂದು ಟ್ರಂಪ್‌ ಭಾರತಕ್ಕೆ ಭೇಟಿ ನೀಡಿದ್ದರು. ಅವರ ಜೊತೆ ಪತ್ನಿ ಮೆಲಾನಿಯಾ, ಮಗಳು ಇವಾಂಕ, ಅಳಿಯ ಜೆರೆಡ್‌ ಸೇರಿದಂತೆ ಅಮೆರಿಕ ಸರ್ಕಾರದ ಉನ್ನತ ಅಧಿಕಾರಿಗಳು ತಂಡ ಭೇಟಿ ಮಾಡಿತ್ತು. ಅವರು ಅಹಮದಾಬಾದ್‌, ಆಗ್ರಾ ಹಾಗೂ ನವದೆಹಲಿ ಭೇಟಿ ನೀಡಿದ್ದರು.

ಟ್ರಂಪ್‌ ಅವರು ತಮ್ಮ ಕುಟುಂಬದೊಂದಿಗೆ ರೋಡ್‌ ಶೋ, ಸಬರಮತಿ ಆಶ್ರಮಕ್ಕೆ ಭೇಟಿ ಸೇರಿದಂತೆ ಅಹಮದಾಬಾದ್‌ನಲ್ಲಿ ನಮಸ್ತೆ ಟ್ರಂಪ್‌ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.

ಟ್ರಂಪ್‌ ಅವರು ಭಾರತಕ್ಕೆ ಬಂದಿದ್ದಾಗ ಕೇಂದ್ರ ಸರ್ಕಾರ ಮಾಡಿರುವ ವೆಚ್ಚದ ಬಗ್ಗೆ ಮಾಹಿತಿ ನೀಡುವಂತೆ ಎರಡು ವರ್ಷಗಳ ಹಿಂದೆ ಭಾತೆನಾ ಎಂಬುವವರು ಆರ್‌ಟಿಐ ಸಲ್ಲಿಸಿದ್ದರು. ಅಧಿಕಾರಿಗಳಿಂದ ಯಾವುದೇ ಉತ್ತರ ಬರದಿದ್ದಾಗ ಅವರು ಮಾಹಿತಿ ಆಯೋಗದ ಮೊರೆ ಹೋಗಿದ್ದರು.

ವಿದೇಶಾಂಗ ಇಲಾಖೆ ಅಧಿಕಾರಿಗಳು ಇದೀಗ ಮಾಹಿತಿ ನೀಡಿದ್ದು ಒಟ್ಟು ₹38 ಲಕ್ಷ ವೆಚ್ಚವಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT