ಶನಿವಾರ, ಸೆಪ್ಟೆಂಬರ್ 18, 2021
27 °C

ನೋಯ್ಡಾದಲ್ಲಿ ‘ಭಾರತೀಯ ಪಾರಂಪರಿಕ ಸಂಸ್ಥೆ‘ ಸ್ಥಾಪನೆಗೆ ನಿರ್ಧಾರ: ಕೇಂದ್ರ ಸಚಿವ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನೋಯ್ಡಾ: ದೆಹಲಿಯ ಸಮೀಪದ ನೋಯ್ಡಾದಲ್ಲಿ ವಿಶ್ವ ದರ್ಜೆಯ ಪಾರಂಪರಿಕ ಸಂಸ್ಥೆಯೊಂದನ್ನು ಸ್ಥಾಪಿಸಲು ನಿರ್ಧರಿಸಿದ್ದು ಇದರಲ್ಲಿ ಕಲೆ, ಸಂರಕ್ಷಣೆ, ಮ್ಯೂಸಿಯಾಲಜಿ ಮತ್ತು ಪುರಾತತ್ವ ಇತಿಹಾಸದ ಸ್ನಾತಕೋತ್ತರ ಮತ್ತು ಡಾಕ್ಟರೇಟ್‌ ಕೋರ್ಸ್‌ಗಳನ್ನು ಆರಂಭಿಸಲಾಗುತ್ತದೆ ಎಂದು ಕೇಂದ್ರ ಸಂಸ್ಕೃತಿ ಖಾತೆ ಸಚಿವ ಜಿ. ಕಿಶನ್‌ರೆಡ್ಡಿ ಹೇಳಿದರು.

ಈ 'ಭಾರತೀಯ ಪಾರಂಪರಿಕ ಸಂಸ್ಥೆ', ದೇಶದ ಶ್ರೀಮಂತ ಪರಂಪರೆ ಮತ್ತು ಅದರ ಸಂರಕ್ಷಣೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆ ನಡೆಸಲು ಅವಕಾಶ ನೀಡಲಿದೆ ಎಂದು ರೆಡ್ಡಿ ಸೋಮವಾರ ಲೋಕಸಭೆಗೆ ಮಾಹಿತಿ ನೀಡಿದರು.

ಭಾರತೀಯ ಪಾರಂಪರಿಕ ಸಂಸ್ಥೆ ಇತಿಹಾಸ, ಕಲೆ, ಸಂರಕ್ಷಣೆ, ಮ್ಯೂಸಿಯಾಲಜಿ, ಆರ್ಕೈವಲ್ ಸ್ಟಡೀಸ್, ಆರ್ಕಿಯಾಲಜಿ, ಪ್ರಿವೆಂಟಿವ್ಸ್ ಕನ್ಸರ್ವೇಶನ್, ಎಪಿಗ್ರಾಫಿ ಮತ್ತು ನಾಣ್ಯ ಶಾಸ್ತ್ರ, ಹಸ್ತಪ್ರತಿಶಾಸ್ತ್ರದಲ್ಲಿ  ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ಆರಂಭಿಸಲಿದೆ. ಹಾಗೆಯೇ, ಭಾರತೀಯ ಪಾರಂಪರಿಕ ಸಂಸ್ಥೆಯ ಸೇವೆಯಲ್ಲಿರುವ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ಸಂರಕ್ಷಣಾ ತರಬೇತಿ ಸೌಲಭ್ಯಗಳನ್ನು ನೀಡುತ್ತದೆ‘ ಎಂದು ಅವರು ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.

ಪುರಾತತ್ವ ಶಾಸ್ತ್ರ ಸಂಸ್ಥೆ (ಪಂಡಿತ್‌ ದೀನ್‌ದಯಾಳ್ ಉಪಾಧ್ಯಾಯ ಪುರಾತತ್ವ ಶಾಸ್ತ್ರ ಸಂಸ್ಥೆ), ನವದೆಹಲಿಯ ಸ್ಕೂಲ್ ಆಫ್ ಆರ್ಕೈವಲ್ ಸ್ಟಡೀಸ್ ಆಫ್ ಇಂಡಿಯನ್ ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾ, ಲಖನೌದಲ್ಲಿನ ನ್ಯಾಷನಲ್‌ ರಿಸರ್ಚ್‌ ಲಾಬೊರೇಟರಿ ಫಾರ್‌ ಕನ್ಸರ್ವೇಷನ್‌ ಆಫ್ ಕಲ್ಚರಲ್‌ ಪ್ರಾಪರ್ಟಿ, ನ್ಯಾಷನಲ್ ಮ್ಯೂಸಿಯಂ ಇನ್ಸ್ಟಿಟ್ಯೂಟ್ ಆಫ್ ಹಿಸ್ಟರಿ ಆಫ್ ಆರ್ಟ್ಸ್‌, ಕನ್ಸರ್ವೇಶನ್ ಅಂಡ್ ಮ್ಯೂಸಿಯಾಲಜಿ ಮತ್ತು ನವದೆಹಲಿಯ ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ ಸಂಸ್ಥೆಗಳನ್ನು ಒಳಗೊಂಡ ಡೀಮ್ಡ್‌ ವಿಶ್ವವಿದ್ಯಾಲಯದ ರೀತಿಯಲ್ಲಿ ಭಾರತೀಯ ಪಾರಂಪರಿಕ ಸಂಸ್ಥೆಯನ್ನು ಸ್ಥಾಪಿಸಲಾಗುತ್ತದೆ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು