ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘2022ಕ್ಕೆ ’ಚಂದ್ರಯಾನ–3’ಯೋಜನೆ: ಇಸ್ರೊ ಚಿಂತನೆ

Last Updated 21 ಫೆಬ್ರುವರಿ 2021, 12:12 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತದ ಬಹುನಿರೀಕ್ಷಿತ ‘ಚಂದ್ರಯಾನ–3’ ಯೋಜನೆಯು 2022ರಲ್ಲಿ ಕಾರ್ಯಗತಗೊಳ್ಳಲಿದೆ’ ಎಂದು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮುಖ್ಯಸ್ಥ ಕೆ.ಶಿವನ್ ತಿಳಿಸಿದ್ದಾರೆ.

ಚಂದ್ರಯಾನ–3 ಸೇರಿದಂತೆ ಕೋವಿಡ್‌–19 ಲಾಕ್‌ಡೌನ್‌ ಅವಧಿಯು ಇಸ್ರೊದ ಹಲವು ಯೋಜನೆಗಳ ಮೇಲೂ ಪರಿಣಾಮ ಬೀರಿದೆ. ನಿಗದಿಯಂತೆ ಇದು, 2020ರ ವರ್ಷಾಂತ್ಯದಲ್ಲಿ ಕಾರ್ಯಗತಗೊಳ್ಳಬೇಕಿತ್ತು.

ಚಂದ್ರಯಾನ–3 ನೌಕೆಯ ಸ್ವರೂಪವೂ ಬಹುತೇಕ ಚಂದ್ರಯಾನ–2ರಂತೆಯೇ ಇರುತ್ತದೆ. ಆದರೆ, ಕಕ್ಷೆಗಾಮಿ ಇರುವುದಿಲ್ಲ. ಚಂದ್ರಯಾನ–2ರಲ್ಲಿ ಉಡಾವಣೆ ಮಾಡಲಾದ ಕಕ್ಷೆಗಾಮಿಯನ್ನೇ ಬಳಕೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಸಿದ್ಧತೆ ನಡೆದಿದ್ದು, ಯೋಜನೆಯು ಬಹುತೇಕ 2022ರಲ್ಲಿ ಕಾರ್ಯಗತಗೊಳ್ಳುವ ಸಂಭವವಿದೆ ಎಂದು ಶಿವನ್‌ ತಿಳಿಸಿದರು.

ಚಂದ್ರನ ದಕ್ಷಿಣ ಧ್ರುವದ ಭಾಗದಲ್ಲಿ ನೌಕೆಯನ್ನು ಇಳಿಸುವ ಗುರಿ ಹೊಂದಿದ್ದ ಚಂದ್ರಯಾನ–2 ಅನ್ನು ಜುಲೈ 22, 2019ರಲ್ಲಿ ಕಕ್ಷೆಗೆ ಉಡಾವಣೆ ಮಾಡಲಾಗಿತ್ತು. ಕಡೆಯ ಹಂತದಲ್ಲಿ ವಿಕ್ರಂ ಲ್ಯಾಂಡರ್ ಉರುಳಿದ ಕಾರಣ, ಭಾರತದ ಕನಸು ಈಡೇರಿರಲಿಲ್ಲ. ಚಂದ್ರಯಾನ–3 ಯೋಜನೆಯು ಇಸ್ರೊಗೆ ಸವಾಲಿನದ್ದಾಗಿದ್ದು, ಭಾರತದ ಸಾಮರ್ಥ್ಯ ಬಿಂಬಿಸುವಂತದ್ದಾಗಿದೆ.

ಗಗನಯಾನ ಯೋಜನೆಯನ್ನು ಈ ವರ್ಷದ ಡಿಸೆಂಬರ್‌ ತಿಂಗಳಲ್ಲಿ ಕಾರ್ಯಗತಗೊಳಿಸುವ ಉದ್ದೇಶವಿದೆ. ನಿಗದಿತ ಯೋಜನೆಯಂತೆ ಇದು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕಾರ್ಯಗತಗೊಳ್ಳಬೇಕಿತ್ತು ಎಂದು ತಿಳಿಸಿದರು.

ಮೂವರು ಭಾರತೀಯರನ್ನು ಅಂತರಿಕ್ಷಕ್ಕೆ ಕಳುಹಿಸುವ ಗುರಿಯನ್ನು ‘ಗಗನಯಾನ’ ಯೋಜನೆಯಡಿ ಹೊಂದಲಾಗಿದೆ. ಈ ಉದ್ದೇಶಕ್ಕಾಗಿ ಆಯ್ಕೆಯಾಗಿರುವ ನಾಲ್ವರು ಪೈಲಟ್‌ಗಳು ಸದ್ಯ ರಷ್ಯಾದಲ್ಲಿ ತರಬೇತಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT