ಮಂಗಳವಾರ, ಜುಲೈ 5, 2022
26 °C

ಚಾರ್‌ಧಾಮ್‌ ಯಾತ್ರೆ ಪುನರಾರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಡೆಹ್ರಾಡೂನ್‌: ಬುಧವಾರ ಬೆಳಿಗ್ಗೆ ಹವಾಮಾನ ಸಾಮಾನ್ಯ ಸ್ಥಿತಿಗೆ ಮರಳಿದ ಹಿನ್ನೆಲೆಯಲ್ಲಿ ಚಾರ್‌ಧಾಮ್‌ ಯಾತ್ರೆಯನ್ನು ಪುನರಾರಂಭಿಸಲಾಗಿದೆ.

ಭಾರಿ ಮಳೆ ಮತ್ತು ಹಿಮಪಾತದಿಂದ ಮಂಗಳವಾರ ಯಾತ್ರೆಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಿ ಸೋನಪ್ರಯಾಗ್‌, ಗೌರಿಕುಂಡ್‌ ಮತ್ತು ಜಾಂಕಿಚಟ್ಟಿಯಲ್ಲಿ ಯಾತ್ರಿಕರಿಗೆ ತಂಗಲು ಸೂಚಿಸಲಾಗಿತ್ತು. ಹವಾಮಾನ ಸುಧಾರಿಸಿರುವ ಹಿನ್ನೆಲೆಯಲ್ಲಿ ಯಾತ್ರಿಕರು ದೇವಸ್ಥಾನಗಳಿಗೆ ತೆರಳಲು ಅವಕಾಶ ನೀಡಲಾಗಿದೆ ಎಂದು ಕೇದರನಾಥ – ಬದರಿನಾಥ ದೇವಸ್ಥಾನ ಮಂಡಳಿ ತಿಳಿಸಿದೆ.

ಹವಾಮಾನ ವೈಪರಿತ್ಯದಿಂದ ಸ್ಥಗಿತಗೊಳಿಸಲಾಗಿದ್ದ ಹೆಲಿಕಾಪ್ಟರ್‌ ಸಂಚಾರವನ್ನೂ ಆರಂಭಿಸಲಾಗಿದೆ.

ಮೇ 3ರಿಂದ ಆರಂಭವಾದ ಚಾರ್‌ಧಾಮ್‌ ಯಾತ್ರೆಯ ಭಾಗವಾಗಿ ಬದರಿನಾಥ, ಕೇದರನಾಥ, ಗಂಗೋತ್ರಿ ಮತ್ತು ಯಮುನೋತ್ರಿಗೆ 9,69,610 ಭಕ್ತಾದಿಗಳು ಭೇಟಿ ನೀಡಿದ್ದಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.