ಗುರುವಾರ , ಆಗಸ್ಟ್ 11, 2022
21 °C

ಅರ್ನಬ್‌ ಗೋಸ್ವಾಮಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಒಳಾಂಗಣ ವಿನ್ಯಾಸಕಾರ (ಇಂಟೀರಿಯರ್‌ ಡಿಸೈನರ್‌) ಅನ್ವಯ್‌ ನಾಯ್ಕ್‌ ಹಾಗೂ ಅವರ ತಾಯಿ ಕುಮುದ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್‌ ಗೋಸ್ವಾಮಿ ಹಾಗೂ ಇತರ ಇಬ್ಬರ ವಿರುದ್ಧ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

‘ಅರ್ನಬ್‌, ಫಿರೋಜ್‌ ಶೇಖ್‌ ಮತ್ತು ನಿತೀಶ್‌ ಸರ್ದಾ ಅವರ ವಿರುದ್ಧ ಅಲಿಭಾಗ್‌ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. 65 ಮಂದಿಯ ಹೆಸರನ್ನು ಸಾಕ್ಷಿಯನ್ನಾಗಿ ನಮೂದಿಸಲಾಗಿದೆ’ ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪ್ರದೀಪ್‌ ಘರತ್‌ ಶುಕ್ರವಾರ ಹೇಳಿದ್ದಾರೆ. 

ಆರೋಪ ಪಟ್ಟಿ ಸಲ್ಲಿಕೆಗೆ ತಡೆ ನೀಡುವಂತೆ ಕೋರಿ ಅರ್ನಬ್‌, ಗುರುವಾರ ಬಾಂಬೆ ಹೈಕೋರ್ಟ್‌ಗೆ ತುರ್ತು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ಬಾಕಿ ಇದೆ.

ಅನ್ವಯ್‌ ನಾಯ್ಕ್‌ ಹಾಗೂ ಅವರ ತಾಯಿ 2018ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೆ ಪ್ರಚೋದನೆ ನೀಡಿದ ಆರೋಪದಡಿ ಅರ್ನಬ್‌, ಫಿರೋಜ್‌ ಮತ್ತು ಸರ್ದಾ ಅವರನ್ನು ಅಲಿಭಾಗ್‌ ಪೊಲೀಸರು ನವೆಂಬರ್‌ 4ರಂದು ಬಂಧಿಸಿದ್ದರು. ನ.11ರಂದು ಸುಪ್ರೀಂಕೋರ್ಟ್‌ ಮೂವರಿಗೂ ಜಾಮೀನು ಮಂಜೂರು ಮಾಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು