ಬಿಜಾಪುರ (ಛತ್ತೀಸ್‌ಗಡ): ಜಿಲ್ಲೆಯ ಮೊಡಕ್ಪಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ನುಕನ್‌ಪಾಲ್ ಹಳ್ಳಿಯಲ್ಲಿ ನಕ್ಸಲರು 50 ವರ್ಷದ ವ್ಯಕ್ತಿಯೊಬ್ಬರನ್ನು ಕೊಂದಿದ್ದಾರೆ.
ಹತ್ಯೆಗೊಳಗಾದ ವ್ಯಕ್ತಿಯನ್ನು ಮುರಾ ಕುದಿಯಮ್ ಎಂದು ಗುರುತಿಸಲಾಗಿದೆ. ಗುರುವಾರ ಕಾರ್ಯಕ್ರಮದ ನಿಮಿತ್ತ ತೆರಳಿದ್ದ ಕುದಿಯಮ್ ಮೇಲೆ ನಕ್ಸಲರು ಹಲ್ಲೆ ನಡೆಸಿ ಕೊಂದಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಉಸೂರ್ ಹಳ್ಳಿಯ ಬಳಿ ಕುದಿಯಂ ಅವರನ್ನು ಸುತ್ತುವರೆದ ಕೆಲವು ನಾಗರಿಕರ ವೇಶದಲ್ಲಿದ್ದ ಸಶಸ್ತ್ರಧಾರಿ ಮಾವೊವಾದಿ ಉಗ್ರರು, ಅವರನ್ನು ಚೂಪಾದ ಆಯುಧಗಳಿಂದ ಹಲವು ಬಾರಿ ಇರಿದು ಕೊಂದಿದ್ದಾರೆ. ಅಲ್ಲಿಂದ ತೆರಳುವ ಮುನ್ನ ಕುದಿಯಂ ಶವವನ್ನು ರಸ್ತೆಯ ಮೇಲೆ ಹಾಕಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯದಲ್ಲಿ ಒಂದು ವಾರದಲ್ಲಿ ನಕ್ಸಲರಿಂದ ನಡೆದ ಎರಡನೇ ಹತ್ಯೆ ಇದಾಗಿದೆ.ಜುಲೈ 11ರಂದು 32 ವರ್ಷದ ವ್ಯಕ್ತಿಯೊಬ್ಬನನ್ನು ಕುಟುರು ಪ್ರದೇಶದಲ್ಲಿ ನಕ್ಸಲರು ಕೊಂದಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.