ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ ದರ ದುರ್ಬಲ, ಚೇತರಿಕೆ ಲಕ್ಷಣಗಳಿಲ್ಲ: ಕಾಂಗ್ರೆಸ್‌ ನಾಯಕ ಚಿದಂಬರಂ

Last Updated 1 ಜೂನ್ 2022, 9:55 IST
ಅಕ್ಷರ ಗಾತ್ರ

ಚೆನ್ನೈ: ದೇಶದ ಜಿಡಿಪಿಯಲ್ಲಿ ಯಾವುದೇ ಬೆಳವಣಿಗೆ ಇಲ್ಲ ಎಂದುಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಬುಧವಾರ ಟ್ವೀಟ್‌ ಮಾಡಿದ್ದಾರೆ.

ಒಟ್ಟಾರೆ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ ದುರ್ಬಲಗೊಳ್ಳುತ್ತಿದ್ದು ಯಾವುದೇ ಭರವಸೆ ಹಾಗೂ ಚೇತರಿಕೆ ಲಕ್ಷಣಗಳಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಈ ತ್ರೈಮಾಸಿಕದಲ್ಲಿ ಶೇ.4.1 ರ ಬೆಳವಣಿಗೆ ದರವನ್ನು ತೋರಿಸುವ ಮೂಲಕ 2021-22ನೇ ಸಾಲಿನಲ್ಲಿ ಒಟ್ಟಾರೆ ಜಿಡಿಪಿ ಶೇ.8.7ರ ಬೆಳವಣಿಗೆಯ ವರದಿಯನ್ನು ಆರ್ಥಿಕ ಇಲಾಖೆ ಅಂದಾಜಿಸಿತ್ತು.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 2021-22ರಲ್ಲಿ 20.1, 8.4, 5.4 ಮತ್ತು 4.1 ರಷ್ಟು ತ್ರೈಮಾಸಿಕ ಬೆಳವಣಿಗೆ ದರಗಳು ಅತ್ಯಂತ ಗಮನಾರ್ಹವಾದ ಗ್ರಾಫ್ ಆಗಿದೆ. ಪ್ರತಿ ತ್ರೈಮಾಸಿಕದಲ್ಲೂ ಬೆಳವಣಿಗೆ ದರ ದುರ್ಬಲಗೊಳ್ಳುತ್ತಿದೆ. ಯಾವುದೇ ಚೇತರಿಕೆಯ ಲಕ್ಷಣಗಳಿಲ್ಲ ಎಂದು ಅವರು ಹೇಳಿದ್ದಾರೆ.

2019-20ರಲ್ಲಿ ಸಾಧಿಸಿದ ಮಟ್ಟಕ್ಕಿಂತ ಈ ಸಲದ ಜಿಡಿಪಿ ಸ್ವಲ್ಪ ಹೆಚ್ಚಾಗಿದೆ. 2020ರ ಮಾರ್ಚ್‌ ಅಂತ್ಯಕ್ಕೆ ಇದ್ದ ಆರ್ಥಿಕತೆಯೇ ಈಗ ಕೂಡ ಅದೇ ಮಟ್ಟದಲ್ಲಿದೆ. ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಚಿದಂಬರಂ ಹೇಳಿದ್ದಾರೆ.

ದೇಶದ ಅರ್ಥ ವ್ಯವಸ್ಥೆಯು ಜನವರಿ–ಮಾರ್ಚ್‌ ಅವಧಿಯಲ್ಲಿ ಶೇಕಡ 4.1ರಷ್ಟು ಬೆಳವಣಿಗೆ ಕಂಡಿದೆ. ಇದರಿಂದಾಗಿ 2021–22ನೆಯ ಆರ್ಥಿಕ ವರ್ಷದಲ್ಲಿ ಆರ್ಥಿಕ ಬೆಳವಣಿಗೆ ದರವು ಶೇ 8.7ರಷ್ಟು ಆದಂತಾಗಿದೆ ಎಂದು ಕೇಂದ್ರ ಆರ್ಥಿಕ ಇಲಾಖೆ ಹೇಳಿತ್ತು.

ತಯಾರಿಕೆ, ಗಣಿಗಾರಿಕೆ ಮತ್ತು ನಿರ್ಮಾಣ ವಲಯಗಳಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದೆ. ಕೋವಿಡ್‌ ಸಾಂಕ್ರಾಮಿಕವು ಆರ್ಥಿಕ ಚಟುವಟಿಕೆಗಳ ಮೇಲೆ ಭಾರಿ ಏಟು ನೀಡಿದ್ದ ಕಾರಣ, 2020–21ನೆಯ ಆರ್ಥಿಕ ವರ್ಷದಲ್ಲಿ ಅರ್ಥ ವ್ಯವಸ್ಥೆಯು ಶೇ (–) 6.6ರಷ್ಟು ಕುಸಿತ ಕಂಡಿತ್ತು ಎಂದು ಆರ್ಥಿಕ ಸಮೀಕ್ಷೆ ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT