ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನ್‌ ಗೆಲುವಿನ ಅಂದಾಜು ಇತ್ತು: ಬಿಪಿನ್‌ ರಾವತ್‌

Last Updated 26 ಆಗಸ್ಟ್ 2021, 1:44 IST
ಅಕ್ಷರ ಗಾತ್ರ

ನವದೆಹಲಿ: ಅಫ್ಗಾನಿಸ್ತಾನವನ್ನುತಾಲಿಬಾನ್‌ ಸ್ವಾಧೀನಪಡಿಸಿಕೊಳ್ಳುವ ಅಂದಾಜು ಭಾರತಕ್ಕೆ ಇತ್ತು. ಆದರೆ, ತಾಲಿಬಾನ್‌ನ ತ್ವರಿತಗತಿ ಆಶ್ಚರ್ಯಗೊಳಿಸಿದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಬುಧವಾರ ಹೇಳಿದ್ದಾರೆ.

ಅಬ್ಸರ್ವರ್‌ ರಿಸರ್ಚ್‌ ಫೌಂಡೇಷನ್‌ (ಒಆರ್‌ಎಫ್‌) ಆಯೋಜಿಸಿದ್ದ ಅಮೆರಿಕದ ಇಂಡೊ–ಪೆಸಿಫಿಕ್‌ ಕಮಾಂಡ್‌ನ ಕಮಾಂಡರ್‌ ಅಡ್ಮಿರಲ್‌ ಜಾನ್‌ ಅಕ್ವಿಲಿನೊ ಅವರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳೆದ 20 ವರ್ಷಗಳಿಂದ ತಾಲಿಬಾನ್‌ ಉದ್ದೇಶ ಮಾತ್ರ ಬದಲಾಗಿಲ್ಲ ಎಂದು ಇದೇ ವೇಳೆ ಉಲ್ಲೇಖಿಸಿದರು.

ತಾಲಿಬಾನ್‌ ನಿಯಂತ್ರಿತ ಅಫ್ಗಾನಿಸ್ತಾನದಿಂದ ಹೊರಹೊಮ್ಮುವ ಯಾವುದೇ ಭಯೋತ್ಪಾದಕ ಚಟುವಟಿಕೆಗಳು ಭಾರತಕ್ಕೆ ಪ್ರವೇಶಿಸುವುದನ್ನು ತಡೆಹಿಡಿಯಲಾಗುವುದು ಎಂದು ಭರವಸೆ ನೀಡಿದ ಅವರು, ಭಯೋತ್ಪಾದನೆ ವಿರುದ್ಧದಜಾಗತಿಕ ಯುದ್ಧದಲ್ಲಿ ಕ್ವಾಡ್‌ರಾಷ್ಟ್ರಗಳು ಸಹಕಾರವನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

‘ಕಳೆದ 20 ವರ್ಷಗಳ ಹಿಂದೆ ಇದ್ದ ತಾಲಿಬಾನ್‌ ಬದಲಾಗಿಲ್ಲ. ಆದರೆ ಅದರಲ್ಲಿರುವ ಜನರು ಮಾತ್ರ ಬದಲಾಗಿದ್ದಾರೆ. ಸಂಘಟನೆಯು ಅಲ್ಲಿ ಯಾವ ರೀತಿ ಚಟುವಟಿಕೆ ನಡೆಸುತ್ತಿದೆ ಎಂದು ಅಲ್ಲಿಂದ ಬಂದ ಸಂತ್ರಸ್ತರು ಹೇಳುತ್ತಾರೆ’ ಎಂದು ರಾವತ್‌ ವಿವರಿಸಿದರು.

ಇವನ್ನೂ ಓದಿ
*

*
*
*
*
*
​*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT