ಡೀಸೆಲ್ ಕುಡಿದು ಮಗು ಸಾವು
ಭುವನೇಶ್ವರ: ಒಡಿಶಾದಲ್ಲಿ ಒಂದೂವರೆ ವರ್ಷದ ಮಗು ಡೀಸೆಲ್ ಕುಡಿದು ಮೃತಪಟ್ಟಿದೆ.
ಮನೆಯಲ್ಲಿ ಬಾಟಲಿಯಲ್ಲಿ ಇಟ್ಟಿದ್ದ ಡೀಸೆಲ್ ಅನ್ನು ಮಗು ನೀರೆಂದು ಭಾವಿಸಿ ಕುಡಿದು ಮೃತಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತ ಮಗುವಿನ ತಂದೆ ವಾಹನಗಳ ರಿಪೇರಿ ಕೆಲಸ ಮಾಡುತ್ತಿದ್ದರು. ಕೆಲಸದ ಸಲುವಾಗಿ ಅವರು ಮನೆಗೆ ಡೀಸೆಲ್ ತಂದಿದ್ದರು.
ಮನೆಯವರ ಗಮನಕ್ಕೆ ಬಾರದಂತೆ ಮಗು ಡೀಸೆಲ್ ಕುಡಿದಿದೆ ಎಂದು ಪೊಲೀಸರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.