ಶುಕ್ರವಾರ, ಅಕ್ಟೋಬರ್ 7, 2022
24 °C
ದೆಹಲಿಯ ಧ್ಯಾನ್‌ಚಂದ್‌ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮ

'ಪ್ರಧಾನಿ ಕ್ರಾಸ್‌ ಕಂಟ್ರಿ ಸ್ಲಮ್‌ ರೇಸ್‌'ನಲ್ಲಿ ಕೊಳಗೇರಿ ಮಕ್ಕಳು, ಯುವಕರು ಭಾಗಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಿಜೆಪಿ ಭಾನುವಾರ ಇಲ್ಲಿ ಆಯೋಜಿಸಿದ್ದ ‘ಪ್ರಧಾನಿ ನರೇಂದ್ರ ಮೋದಿ ಕ್ರಾಸ್‌ ಕಂಟ್ರಿ ಸ್ಲಮ್‌ ರೇಸ್‌’ ಕಾರ್ಯಕ್ರಮದಲ್ಲಿ  ದೆಹಲಿಯ ಕೊಳಗೇರಿಗಳಲ್ಲಿ ವಾಸಿಸುವ ಸಾವಿರಾರು ಮಕ್ಕಳು ಮತ್ತು ಯುವಕರು ಪಾಲ್ಗೊಂಡರು.

ಪ್ರಧಾನಿ ಮೋದಿ ಜನ್ಮದಿನ ಅಂಗವಾಗಿ ‘ಸೇವಾ ಪಖ್ವಾರಾ’ ಕಾರ್ಯಕ್ರಮದಡಿ ಧ್ಯಾನ್‌ಚಂದ್‌ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಓಟಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಸಮಾಜದ ಎಲ್ಲ ವರ್ಗದ ಜನರನ್ನೂ ಮುಖ್ಯವಾಹಿನಿಗೆ ಕರೆತರುವುದು ಪ್ರಧಾನಿ  ಮೋದಿ ಅವರ ಗುರಿ.  ಈ ಓಟವು ಶಿಕ್ಷಣದ ಜೊತೆಗೆ ಮಕ್ಕಳನ್ನು ಕ್ರೀಡೆಯೊಂದಿಗೆ ಸಂಪರ್ಕಿಸುತ್ತದೆ ಮತ್ತು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು