ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ವರ್ಷದ ಬಳಿಕ ಭಾರತದ ಅಕ್ಕಿ ಆಮದು ಮಾಡಿಕೊಂಡ ಚೀನಾ

Last Updated 3 ಡಿಸೆಂಬರ್ 2020, 18:55 IST
ಅಕ್ಷರ ಗಾತ್ರ

ನವದೆಹಲಿ: ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಸ್ಪರ್ಧಾತ್ಮಕ ಬೆಲೆಗೆ ಅಕ್ಕಿಯ ಮಾರಾಟಕ್ಕೆ ಭಾರತವು ಒಪ್ಪಿದ ಕಾರಣ ಎರಡು ವರ್ಷಗಳ ಬಳಿಕ ಭಾರತದ ಅಕ್ಕಿಯನ್ನು ಚೀನಾ ಆಮದು ಮಾಡಿಕೊಳ್ಳುತ್ತಿದೆ. 5 ಸಾವಿರ ಟನ್‌ ಬಾಸುಮತಿ ಅಲ್ಲದ ಅಕ್ಕಿ ಖರೀದಿಗೆ ಚೀನಾ ಮುಂದಾಗಿದೆ ಎಂದು ಅಖಿಲ ಭಾರತ ಅಕ್ಕಿ ರಫ್ತುಗಾರರ ಸಂಘವು(ಎಐಆರ್‌ಇಎ) ತಿಳಿಸಿದೆ.

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಅಕ್ಕಿಯನ್ನು ರಫ್ತು ಮಾಡುವ ರಾಷ್ಟ್ರವಾಗಿದ್ದು, ಚೀನಾ ಅತಿ ಹೆಚ್ಚು ಅಕ್ಕಿಯನ್ನು ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿದೆ. ಪೂರ್ವ ಲಡಾಖ್‌ನಲ್ಲಿ ಗಡಿ ಸಂಘರ್ಷ ಮುಂದುವರಿದಿರುವ ಸಂದರ್ಭದಲ್ಲೇ ಭಾರತದಿಂದ ಅಕ್ಕಿಯನ್ನು ಖರೀದಿಸಲು ಚೀನಾ ಮುಂದಾಗಿದೆ.

‘2006ರಲ್ಲಿ ಮಾರುಕಟ್ಟೆ ಪ್ರವೇಶಕ್ಕೆ ಚೀನಾ ಒಪ್ಪಿಗೆ ನೀಡಿತ್ತು. ಆದರೆ 2017–18ರಲ್ಲಷ್ಟೇ ಭಾರತದಿಂದ 974 ಟನ್‌ ಅಕ್ಕಿಯನ್ನು ಆಮದು ಮಾಡಿಕೊಂಡಿತ್ತು. ಇದೀಗ ಎರಡು ವರ್ಷಗಳ ಬಳಿಕ ಅಕ್ಕಿಗೆ ಬೇಡಿಕೆ ಇರಿಸಿದ್ದಾರೆ. 2020–21ರಲ್ಲಿ ಅಕ್ಟೋಬರ್‌ವರೆಗೆ 150 ಟನ್‌ಗಿಂತ ಕಡಿಮೆ ಬಾಸುಮತಿ ಅಕ್ಕಿ ರಫ್ತಾಗಿದೆ. ಕಳೆದ ಎರಡು ತಿಂಗಳಲ್ಲಿ 5 ಸಾವಿರ ಟನ್‌ ದಕ್ಷಿಣ ಭಾರತದ ಅಕ್ಕಿ(ಬ್ರೋಕನ್‌ ರೈಸ್‌) ಖರೀದಿಗೆ ಚೀನಾ ಬೇಡಿಕೆ ಇರಿಸಿದೆ’ ಎಂದು ಎಐಆರ್‌ಇಎ ಕಾರ್ಯನಿರ್ವಾಹಕ ನಿರ್ದೇಶಕ ವಿನೋದ್‌ ಕೌಲ್‌ ತಿಳಿಸಿದರು.

ಈ ಅಕ್ಕಿಯನ್ನು ಬಹುತೇಕವಾಗಿ ನೂಡಲ್ಸ್‌ ಮಾಡಲು ಹಾಗೂ ವೈನ್‌ ತಯಾರಿಕೆಗೆ ಬಳಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT