ಶನಿವಾರ, ಮೇ 15, 2021
22 °C

ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ: ಉದ್ಯಮಿ ಯೂಸುಫ್‌ ಆಲಿ ಸೇರಿ 7 ಮಂದಿ ಪಾರು

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಕೊಚ್ಚಿ: ಅನಿವಾಸಿ ಭಾರತೀಯ ಉದ್ಯಮಿ ಎಂ.ಎ ಯೂಸುಫ್‌ ಆಲಿ ಸೇರಿದಂತೆ ಒಟ್ಟು 7 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್‌ವೊಂದು ಭಾನುವಾರ ಬೆಳಿಗ್ಗೆ ಕೇರಳದ ಕೊಚ್ಚಿಯಲ್ಲಿ ಪತನಗೊಂಡಿದೆ.

ಲೂಲು ಗ್ರೂಪ್‌ನ ಸ್ಥಾಪಕ ಯೂಸುಫ್‌ ಆಲಿ, ಅವರ ಪತ್ನಿ ಮತ್ತು ಸಂಸ್ಥೆಯ ಮೂವರು ಸಿಬ್ಬಂದಿ ಹಾಗೂ ಗಗನಸಖಿಯರಿಬ್ಬರು ಲೂಲು ಗ್ರೂಪ್‌ನ ಹೆಲಿಕಾಪ್ಟರ್‌ನಲ್ಲಿ ಪ್ರಯಣಿಸುತ್ತಿದ್ದರು. ಸದ್ಯ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಎಲ್ಲರೂ ಸುರಕ್ಷಿತರಾಗಿದ್ದಾರೆ. ಸದ್ಯ ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ’ ಎಂದು ಲೇಕ್‌ಶೋರ್‌ ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಈ ಘಟನೆ ಭಾನುವಾರ ಬೆಳಿಗ್ಗೆ 8.30 ರ ಸುಮಾರಿಗೆ ನಡೆದಿದ್ದು, ಹೆಲಿಕಾಪ್ಟರ್‌ ಜೌಗು ಪ್ರದೇಶದಲ್ಲಿ ಪತನಗೊಂಡಿದೆ’ ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು