ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಕಾಮಗಾರಿಗಳಿಗೆ ಸಿಎಂ ನವೀನ್‌ ಪಟ್ನಾಯಕ್‌ ಚಾಲನೆ

Last Updated 5 ಮಾರ್ಚ್ 2023, 15:43 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ಬಿಜು ಎಕ್ಸ್‌ಪ್ರೆಸ್‌ವೇ ಹಾಗೂ ಮತ್ತು ಬಿಜು ಆರ್ಥಿಕ ಕಾರಿಡಾರ್ ಅನ್ನು ಭಾನುವಾರ ಉದ್ಘಾಟಿಸಿದರು.

ಒಡಿಶಾದ ಪಶ್ಚಿಮ ಜಿಲ್ಲೆಗಳಿಗೆ ಭೇಟಿ ನೀಡಿದ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಿದರು.

ಇಲ್ಲಿನ ಘಾಟಿಪಾಡಾ ಮತ್ತು ಅಂಪಾನಿಯನ್ನು ಸಂಪರ್ಕಿಸುವ 174 ಕಿ.ಮೀ ಉದ್ದದ ನಾಲ್ಕು ಪಥದ ಬಿಜು ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಿದರು. ಇದನ್ನು ಸುಮಾರು ₹590 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

ಒಡಿಶಾದ ಪಶ್ಚಿಮ ಜಿಲ್ಲೆಗಳಿಗೆ ಉದ್ಯಮ ಹಾಗೂ ವ್ಯವಹಾರದ ಅಭಿವೃದ್ಧಿಗಾಗಿ ಬಿಜು ಆರ್ಥಿಕ ಕಾರಿಡಾರ್‌ಗೆ ಚಾಲನೆ ನೀಡಿದರು. ತಮ್ಮ ತಂದೆ ಬಿಜು ಪಟ್ನಾಯಕ್ ಅವರ 107ನೇ ಜನ್ಮದಿನವಾದ ಇಂದು ವಿವಿಧ ಅಭಿವೃದ್ದಿ ಕೆಲಸಗಳಿಗೆ ಚಾಲನೆ ನೀಡಿದ್ದು ವಿಶೇಷ.

ಈ ನಡುವೆ ನವೀನ್‌ ಪಟ್ನಾಯಕ್‌ ನಡೆಯನ್ನು ‘ರಾಜಕೀಯ ಗಿಮಿಕ್‌‘ ಎಂದು ಬಿಜೆಪಿ ಟೀಕೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT