ಗುರುವಾರ , ಡಿಸೆಂಬರ್ 3, 2020
19 °C

ಕಲ್ಲಿದ್ದಲು ಹಗರಣ: ಮಾಜಿ ಸಚಿವ ದಿಲೀಪ್‌ಗೆ 3 ವರ್ಷ ಜೈಲು ಶಿಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಲ್ಲಿದ್ದಲು ಅಕ್ರಮ ಹಂಚಿಕೆ ಹಗರಣದ ಪ್ರಮುಖ ಆರೋಪಿ, ಕೇಂದ್ರದ ಮಾಜಿ ಸಚಿವ ದಿಲೀಪ್‌ ರೇ ಅವರಿಗೆ ದೆಹಲಿ ನ್ಯಾಯಾಲಯವು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ದಿಲೀಪ್‌ ಕಲ್ಲಿದ್ದಲು ಖಾತೆ ರಾಜ್ಯ ಸಚಿವರಾಗಿದ್ದರು. 1999ರಲ್ಲಿ ನಡೆದಿದ್ದ ಜಾರ್ಖಂಡ್‌ ಕಲ್ಲಿದ್ದಲು ಘಟಕದ ಅಕ್ರಮ ಹಂಚಿಕೆಯ ಹಗರಣದಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿತ್ತು.

‘ದಿಲೀಪ್‌ ರೇ ಜೊತೆಗೆ ಆಗ ಕಲ್ಲಿದ್ದಲು ಸಚಿವಾಲಯದ ಹಿರಿಯ ಅಧಿಕಾರಿಗಳಾಗಿದ್ದ ಪ್ರದೀಪ್‌ ಕುಮಾರ್‌ ಬ್ಯಾನರ್ಜಿ ಮತ್ತು ನಿತ್ಯಾನಂದ ಗೌತಮ್‌ ಹಾಗೂ ಕ್ಯಾಸ್ಟ್ರೊನ್‌ ಟೆಕ್ನಾಲಜೀಸ್‌ ಲಿಮಿಟೆಡ್‌ನ (ಸಿಟಿಎಲ್‌) ನಿರ್ದೇಶಕ ಮಹೇಂದ್ರ ಕುಮಾರ್‌ ಅಗರವಾಲ್‌ ಅವರಿಗೂ ತಲಾ ಮೂರು ವರ್ಷ ಸೆರೆವಾಸ ವಿಧಿಸಲಾಗಿದೆ. ಇವರೆಲ್ಲರೂ ತಲಾ ₹10 ಲಕ್ಷ ದಂಡವನ್ನೂ ಕಟ್ಟಬೇಕು’ ಎಂದು ವಿಶೇಷ ನ್ಯಾಯಾಧೀಶ ಭಾರತ್‌ ಪರಾಶರ್‌ ಅವರು ಸೋಮವಾರ ತಿಳಿಸಿದ್ದಾರೆ.

ಸಿಎಲ್‌ಟಿ ಮತ್ತು ಕ್ಯಾಸ್ಟ್ರೊನ್‌ ಮೈನಿಂಗ್‌ ಲಿಮಿಟೆಡ್‌ (ಸಿಎಂಎಲ್‌) ಸಂಸ್ಥೆಗಳೂ ಅಕ್ರಮದಲ್ಲಿ ಪಾಲ್ಗೊಂಡಿರುವ ಕಾರಣ ಈ ಸಂಸ್ಥೆಗಳು ತಲಾ ₹60 ಲಕ್ಷ ಹಾಗೂ ₹10 ಲಕ್ಷ ದಂಡ ಕಟ್ಟಬೇಕೆಂದೂ ನ್ಯಾಯಾಲಯ ಆದೇಶಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು