ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿದ್ದಲು ಕೊರತೆಯಿಂದ 12 ರಾಜ್ಯಗಳಲ್ಲಿ ವಿದ್ಯುತ್‌ ಬಿಕ್ಕಟ್ಟು: ಮಹಾ ಸಚಿವ

Last Updated 19 ಏಪ್ರಿಲ್ 2022, 13:50 IST
ಅಕ್ಷರ ಗಾತ್ರ

ಮುಂಬೈ: ‘ಕಲ್ಲಿದ್ದಲು ಕೊರತೆಯಿಂದ 12 ರಾಜ್ಯಗಳಲ್ಲಿ ವಿದ್ಯುತ್‌ ಬಿಕ್ಕಟ್ಟು ಎದುರಾಗುತ್ತಿದೆ’ ಎಂದು ಮಹಾರಾಷ್ಟ್ರದ ಇಂಧನ ಸಚಿವ ನಿತಿನ್‌ ರಾವುತ್‌ ಹೇಳಿದರು.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾವುತ್‌, ‘ನಮ್ಮ ಇಲಾಖೆಯು ಸೂಕ್ಷ್ಮ ಹಂತದ ಯೋಜನೆಯೊಂದಿಗೆ ವಿದ್ಯುತ್‌ ಕೊರತೆಯನ್ನು ತಗ್ಗಿಸಲು ಕೆಲಸ ಮಾಡುತ್ತಿದೆ. ಕಳೆದ ಐದಾರು ದಿನಗಳಿಂದ ಸೂಕ್ಷ ಹಂತದ ಯೋಜನೆಯಿಂದಾಗಿ ಮಹಾರಾಷ್ಟ್ರದಲ್ಲಿ ವಿದ್ಯುತ್‌ ನಿಲುಗಡೆ ಕಂಡುಬಂದಿಲ್ಲ. ರಾಜ್ಯದಲ್ಲಿ ಕೇವಲ ಶೇಕಡ 15ರಷ್ಟು ವಿದ್ಯುತ್‌ ಕೊರತೆ ಉಂಟಾಗಿದೆ’ ಎಂದು ತಿಳಿಸಿದರು.

‘ಕೆಂದ್ರ ಸರ್ಕಾರವು ಕಲ್ಲಿದ್ದಲು ಆಮದನ್ನು ನಿಲ್ಲಿಸಿರುವುದರಿಂದ ದೇಶವು ಕಲ್ಲಿದ್ದಲು ಕೊರತೆ ಅನುಭವಿಸುತ್ತಿದೆ. ಆದ್ದರಿಂದ ರಾಜ್ಯ ಸ್ವಾಮ್ಯದ ಮಹಾಜೆಂಕೋ 8 ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಿದೆ. ರಾಜ್ಯ ಸರ್ಕಾರವು ಒಂದು ಲಕ್ಷ ಮೆಟ್ರಿಕ್‌ ಟನ್‌ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಗುತ್ತಿಗೆ ಆದೇಶ ನೀಡಿದೆ’ ಎಂದು ರಾವುತ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT