ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ದಟ್ಟ ಮಂಜು, ರೈಲು ಸಂಚಾರಕ್ಕೆ ಅಡ್ಡಿ

Last Updated 24 ಡಿಸೆಂಬರ್ 2022, 13:54 IST
ಅಕ್ಷರ ಗಾತ್ರ

ನವದೆಹಲಿ: ದೇಶದ ರಾಜಧಾನಿಯ ಕೆಲ ಭಾಗಗಳಲ್ಲಿ ಶನಿವಾರ ದಟ್ಟವಾದ ಮಂಜು ಆವರಿಸಿದ್ದ ಕಾರಣ 100 ಮೀಟರ್‌ಗಿಂತ ದೂರ ಕಾಣಿಸಿದಂತಾಯಿತು. ಇದರಿಂದ ರೈಲು ಹಾಗೂ ಸಾರಿಗೆ ಸಂಚಾರದಲ್ಲಿ ವ್ಯತ್ಯಯವಾಗಿದೆ.

ಬೆಳಗ್ಗೆ 5.30ಕ್ಕೆ ಪಾಲಂನಲ್ಲಿ ವಸ್ತುಗಳ ಗೋಚರ ಮಟ್ಟವು 100 ಮೀಟರ್, ಸಫ್ದರ್‌ಜಂಗ್‌ನಲ್ಲಿ 200 ಮೀಟರ್ ಇತ್ತು ಎಂದು ದೆಹಲಿಯ ಹವಾಮಾನ ವರದಿ ಕೇಂದ್ರ ತಿಳಿಸಿದೆ. ಪಂಜಾಬ್‌, ರಾಜಸ್ಥಾನ, ಬಿಹಾರಗಳಲ್ಲೂ ಮಂಜು ದಟ್ಟವಾಗಿತ್ತು. ಒಟ್ಟು 14 ರೈಲುಗಳ ಪ್ರಯಾಣದ ಸಮಯ 1.30 ರಿಂದ 3.30 ಗಂಟೆ ವ್ಯತ್ಯಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯಲ್ಲಿನ ಕನಿಷ್ಠ ತಾಪಮಾನ 5.4 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ.

ಶ್ರೀನಗರ ವರದಿ: ಕಾಶ್ಮೀರ ಕಣಿವೆಯ ಬಹಳಷ್ಟು ಸ್ಥಳಗಳಲ್ಲಿ ಕನಿಷ್ಠ ತಾಪಮಾನ ದಾಖಲಾಗುತ್ತಿರುವ ಕಾರಣ ಚಳಿ ಹೆಚ್ಚಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಮೈನಸ್‌ 4.8 ಡಿಗ್ರಿ ಸೆಲ್ಷಿಯಸ್‌ ಇದ್ದ ತಾಪಮಾನಗುರುವಾರ ರಾತ್ರಿ ಮೈನಸ್‌ 5.4 ಡಿಗ್ರಿ ಸೆಲ್ಸಿಯಸ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT