ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀತ ಮಾರುತದ ಸುಳಿಯಲ್ಲಿ ದೆಹಲಿ

Last Updated 15 ಡಿಸೆಂಬರ್ 2020, 7:44 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಶೀತ ಮಾರುತದಿಂದ ತತ್ತರಿಸಿದೆ. ಮಂಗಳವಾರ ತಾಪಮಾನ 4.1 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಇದು ಈ ಚಳಿಗಾಲದಲ್ಲಿಯೇ ಅತಿ ಕಡಿಮೆ ತಾಪಮಾನವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

ಹಿಮಾಲಯ ಪರ್ವತದ ಪಶ್ಚಿಮ ಭಾಗದಿಂದ ಶೀತ ಮಾರುತಗಳು ಬೀಸುತ್ತಿರುವ ಕಾರಣತಾಪಮಾನ 4.5 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆಯಾಗಲಿದ್ದು, ಸಮತಟ್ಟು ಪ್ರದೇಶಗಳಲ್ಲಿ ಸಹ ಎರಡು ದಿನಗಳು ಈ ಶೀತ ಗಾಳಿ ಬೀಸಲಿದೆ ಎಂದೂ ಇಲಾಖೆಯ ಮೂಲಗಳು ಹೇಳಿವೆ.

‘ದೆಹಲಿಯ ಕೆಲ ಭಾಗಗಳಲ್ಲಿ ಇನ್ನೂ ಕಡಿಮೆ ತಾಪಮಾನ ದಾಖಲಾಗಿದೆ. ಸಫ್ದರ್‌ಜಂಗ್‌ ವೀಕ್ಷಣಾಲಯದಲ್ಲಿ ತಾಪಮಾನ 4.1 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಜಾಫರ್‌ಪುರದಲ್ಲಿ ಮತ್ತಷ್ಟೂ ಕಡಿಮೆ ಅಂದರೆ 3.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ’ ಎಂದು ಇಲಾಖೆಯ ಪ್ರಾದೇಶಿಕ ಮುನ್ಸೂಚನೆ ಕೇಂದ್ರದ ಮುಖ್ಯಸ್ಥ ಕುಲದೀಪ್‌ ಶ್ರೀವಾಸ್ತವ ಹೇಳಿದರು.

ಆಯಾನಗರ, ಲೋಧಿ ರಸ್ತೆಗಳಲ್ಲಿರುವ ಹವಾಮಾನ ಕೇಂದ್ರಗಳಲ್ಲಿ ಕ್ರಮವಾಗಿ 4 ಹಾಗೂ 4.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.

ನಗರದ ವಾಯುವಿನ ಗುಣಮಟ್ಟದಲ್ಲಿಯೂ ಸ್ವಲ್ಪ ಸುಧಾರಣೆ ಕಂಡು ಬಂದಿದೆ. ಪ್ರಬಲ ಮಾರುತಗಳು ಬೀಸುತ್ತಿರುವುದೇ ವಾಯುವಿನ ಗುಣಮಟ್ಟ ಸುಧಾರಿಸಲು ಕಾರಣ ಎಂದು ಇಲಾಖೆ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT