ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020ರಲ್ಲಿ ಕೋಮುಗಲಭೆ ಪ್ರಕರಣಗಳು ದ್ವಿಗುಣ: ಎನ್‌ಸಿಆರ್‌ಬಿ ವರದಿ

Last Updated 17 ಸೆಪ್ಟೆಂಬರ್ 2021, 3:42 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್-19 ಪಿಡುಗಿನ ಹೊರತಾಗಿಯೂ 2019ಕ್ಕೆ ಹೋಲಿಸಿದಾಗ 2020ರಲ್ಲಿ ಕೋಮುವಾದ ಹಾಗೂ ಧಾರ್ಮಿಕ ಗಲಭೆಯ ಪ್ರಕರಣಗಳು ದ್ವಿಗುಣಗೊಂಡಿದೆ ಎಂದು ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೊ (ಎನ್‌ಸಿಆರ್‌ಬಿ) ತಿಳಿಸಿದೆ.

ಕೋವಿಡ್-19 ಕಾಲಘಟ್ಟದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿತ್ತು. ಸೀಮಿತ ಹೊರಾಂಗಣ ಚಟುವಟಿಕೆಗಳ ಹೊರತಾಗಿಯೂ ಕೋಮು ಗಲಭೆಯಲ್ಲಿ ಇಳಿಮುಖವಾಗಿಲ್ಲ ಎಂದು ಸರ್ಕಾರಿ ಅಂಕಿಅಂಶಗಳು ತಿಳಿಸಿವೆ.

2020ರಲ್ಲಿ ದೇಶದಲ್ಲಿ 857 ಕೋಮುಗಲಭೆ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದೆ. 2019ರಲ್ಲಿ ಈ ಸಂಖ್ಯೆಯು 438 ಹಾಗೂ 2018ರಲ್ಲಿ 512ರಷ್ಟಾಗಿತ್ತು.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ 2020 ಮಾರ್ಚ್ 25ರಿಂದ ಮೇ ತಿಂಗಳವರೆಗೆ ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿತ್ತು.

2020ರ ಜನವರಿಯಲ್ಲಿ ಈಶಾನ್ಯ ದೆಹಲ್ಲಿ ಪೌರತ್ವ ಕಾನೂನು ಹಾಗೂ ಕೋಮುಗಲಭೆಗೆ ಸಂಬಂಧಿಸಿದಂತೆ ಅನೇಕ ಪ್ರತಿಭಟನೆಗಳು ನಡೆದಿದ್ದವು ಎಂದು ವರದಿಯು ಉಲ್ಲೇಖಿಸಿದೆ.

2020ರಲ್ಲಿ 736 ಜಾತಿ ಸಂಘರ್ಷ ಪ್ರಕರಣಗಳು ದಾಖಲಾಗಿವೆ. 2019ರಲ್ಲಿ ಇದು 492 ಹಾಗೂ 2018ರಲ್ಲಿ 656 ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT