ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನ ಓಲೈಕೆ ರಾಜಕಾರಣದಿಂದ ರಾಜಸ್ಥಾನದಲ್ಲಿ ಕೋಮುಗಲಭೆ ಹೆಚ್ಚಳ: ಸಚಿವ

Last Updated 12 ಮೇ 2022, 7:32 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ಪಕ್ಷದಓಲೈಕೆ ರಾಜಕಾರಣದಿಂದಾಗಿ ರಾಜಸ್ಥಾನದಲ್ಲಿ ಕೋಮುಗಲಭೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕೇಂದ್ರ ಸಚಿವ ಕೈಲಾಶ್ ಚೌಧರಿ ಗುರುವಾರ ಆರೋಪಿಸಿದ್ದಾರೆ.

ರಾಜಸ್ಥಾನದ ಹನುಮನಗರ ಜಿಲ್ಲೆಯ ನೊಹರ್‌ನಲ್ಲಿ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಮುಖಂಡ ಸತ್ವೀರ್‌ ಸಹರನ್‌ ಅವರ ಮೇಲೆ ಬುಧವಾರ ಸಂಜೆ ಹಲ್ಲೆ ನಡೆದಿದೆ. ಇದನ್ನು ಉಲ್ಲೇಖಿಸಿಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಖಾತೆ ಸಚಿವ ಚೌಧರಿ ಟ್ವೀಟ್‌ ಮಾಡಿದ್ದಾರೆ.ಹಲ್ಲೆ ಪ್ರಕರಣ 'ವಿಷಾದನೀಯ' ಎಂದಿರುವ ಅವರು, ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

'ಕಾಂಗ್ರೆಸ್‌ನಓಲೈಕೆ ರಾಜಕಾರಣದಿಂದಾಗಿ ರಾಜ್ಯದಲ್ಲಿ ಕೋಮು ಗಲಭೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಅಪರಾಧಿಗಳು ಉತ್ತೇಜನ ಪಡೆದುಕೊಳ್ಳುತ್ತಿದ್ದಾರೆ' ಎಂದು ಕಿಡಿಕಾರಿದ್ದಾರೆ.

ಮುಂದುವರಿದು, 'ಹನುಮನಗರ ಜಿಲ್ಲೆಯನೊಹರ್‌ನಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದ ಯುವಕರು ವಿವಿಎಚ್‌ಪಿ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿರುವುದು ವಿಷಾಧನೀಯ ಮತ್ತು ಖಂಡನೀಯ. ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದ್ದಾರೆ.

ಸಹರನ್‌ ಮತ್ತು ಬೆಂಬಲಿಗರು ಬುಧವಾರ ಸಂಜೆ ದೇವಾಲಯದ ಮುಂದೆ ಕುಳಿತಿದ್ದ ಒಂದು ಸಮುದಾಯದವರನ್ನು ಅಲ್ಲಿಂದ ಕಳುಹಿಸಲು ಯತ್ನಿಸಿದ್ದರು. ಈ ವೇಳೆ ಘರ್ಷಣೆ ನಡೆದಿತ್ತು.ಸಹರನ್‌ ಸೇರಿದಂತೆ ಹಲವರು ಗಾಯಗೊಂಡಿದ್ದರು. ಇದಾದ ಬಳಿಕ ನೊಹರ್‌ ಪಟ್ಟಣದಾದ್ಯಂತ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಸಹರನ್‌ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರೊಚ್ಚಿಗೆದ್ದ ಜನರು ಸ್ಥಳದಲ್ಲಿ ಜಮಾಯಿಸಿ, ನೊಹರ್‌–ರಾವ್‌ತ್ಸರ್‌ ರಸ್ತೆಯನ್ನು ಬಂದ್‌ ಮಾಡಿದ್ದರು.

ದೇವಾಲಯದ ಎದುರು ಕುಳಿತಿದ್ದವರುಮಹಿಳೆಯರನ್ನು ಚುಡಾಯಿಸುತ್ತಿದ್ದರು. ಅವರನ್ನು ತಡೆಯಲು ಯತ್ನಿಸಿದಾಗ ಗಲಭೆ ನಡೆದಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇದೀಗ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.

ರಾಜಸ್ಥಾನದಲ್ಲಿ ಒಂದರ ಹಿಂದೊಂದು ಗಲಭೆ ಪ್ರಕರಣಗಳು ವರದಿಯಾಗುತ್ತಿವೆ.

ವಿಎಚ್‌ಪಿ ಮುಖಂಡನ ಮೇಲಿನ ಹಲ್ಲೆ ಪ್ರಕರಣಕ್ಕೂ ಮುನ್ನ22 ವರ್ಷದ ಯುವಕನೊಬ್ಬನನ್ನು ಭಿಲ್ವಾರಾದಲ್ಲಿ ಹತ್ಯೆ ಮಾಡಲಾಗಿತ್ತು. ಮಂಗಳವಾರ ನಡೆದ ಈ ಕೃತ್ಯವನ್ನು ಖಂಡಿಸಿಬಿಜೆಪಿ, ವಿಎಚ್‌ಪಿ ಮತ್ತು ಹಿಂದೂ ಜಾಗರಣ ಮಂಚ್‌ ಸದಸ್ಯರು ಜಿಲ್ಲೆಯಾದ್ಯಂತ ಬಂದ್‌ಗೆ ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT