ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಲ್‌ ದೇಶಮುಖ್‌ ಪ್ರಕರಣ: ಇಬ್ಬರ ವಿರುದ್ಧ ಸಿಬಿಐ ದೋಷಾರೋಪ

Last Updated 23 ಡಿಸೆಂಬರ್ 2021, 12:19 IST
ಅಕ್ಷರ ಗಾತ್ರ

ನವದೆಹಲಿ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಅವರ ವಿರುದ್ಧದ ಲಂಚ ಆರೋಪಕ್ಕೆ ಸಂಬಂಧಿಸಿದಂತೆ ಮಾಹಿತಿ ಸೋರಿಕೆ ಆರೋಪದಲ್ಲಿ ಬಂಧಿತರಾದ ಸಿಬಿಐ ಅಧಿಕಾರಿ ಮತ್ತು ವಕೀಲರೊಬ್ಬರಿಂದ ಹೇಳಿಕೆ ಒಳಗೊಂಡ ಉಪಕರಣಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಮಾಜಿ ಸಚಿವರ ವಿರುದ್ಧದ ಪ್ರಕರಣವನ್ನು ಬುಡಮೇಲು ಮಾಡಲು ಯತ್ನಿಸಿದ ಸಂಸ್ಥೆಯ ಅಧಿಕಾರಿ ಮತ್ತು ವಕೀಲರ ವಿರುದ್ಧ ಸಿಬಿಐ ದೋಷಾರೋಪ ಪಟ್ಟಿ ತಯಾರಿಸಿದೆ ಎಂದು ಸಹ ಅವರ ತಿಳಿಸಿದ್ದಾರೆ.

ದೇಶಮುಖ್‌ ವಿರುದ್ಧದ ಪ್ರಕರಣದ ತನಿಖಾಧಿಕಾರಿ ಸುಬೋಧ್‌ ಕುಮಾರ್‌ ಜೈಸ್ವಾಲ್ ಅವರು ದಾಖಲಿಸಿಕೊಂಡ ಹೇಳಿಕೆಯನ್ನು ಹೊಂದಿದ್ದ ಪೆನ್‌ಡ್ರೈವ್‌ ಅನ್ನು ಸಿಬಿಐನ ಸಬ್‌–ಇನ್‌ಸ್ಪೆಕ್ಟರ್‌ ಅಭಿಷೇಕ್‌ ತಿವಾರಿ ಅವರಿಂದ ಹಾಗೂ ವಕೀಲ ಆನಂದ ದಾಗಾ ಅವರ ದೂರವಾಣಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಲ್ಲಿಯ ವಿಶೇಷ ನ್ಯಾಯಾಲಯವೊಂದರ ಮುಂದೆ ಸಿಬಿಐ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

ತಿವಾರಿ ಅವರು ದೇಶಮುಖ್‌ ಪ್ರಕರಣದ ತನಿಖಾಧಿಕಾರಿಗಳಲ್ಲಿ ಒಬ್ಬರಾಗಿದ್ದರು. ತಿವಾರಿ ಮತ್ತು ದಾಗಾ ಇಬ್ಬರೂ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT