ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ಭಯೋತ್ಪಾದಕ ನಂಟು ಬಯಲು ಮಾಡಲು 22 ಕಡೆ ಸುದ್ದಿಗೋಷ್ಠಿ: ಕಾಂಗ್ರೆಸ್

Last Updated 9 ಜುಲೈ 2022, 8:03 IST
ಅಕ್ಷರ ಗಾತ್ರ

ನವದೆಹಲಿ: ಭಯೋತ್ಪಾದನೆ ಮತ್ತು ಭಯೋತ್ಪಾದಕರೊಂದಿಗೆ ಆಡಳಿತಾರೂಢ ಬಿಜೆಪಿ ಹೊಂದಿರುವ ನಂಟನ್ನು ಬಹಿರಂಗಪಡಿಸುವ ಉದ್ದೇಶದೊಂದಿಗೆ ದೇಶದ 22 ನಗರಗಳಲ್ಲಿ ಪಕ್ಷದ 22 ನಾಯಕರು ಸರಣಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಕಾಂಗ್ರೆಸ್‌ ಹೇಳಿದೆ.

ಬಿಜೆಪಿಯ ‘ನಕಲಿ ರಾಷ್ಟ್ರೀಯತೆ’ಗೆ ತಿರುಗೇಟು ನೀಡುವುದು, ಘೋರ ಅಪರಾಧಗಳಲ್ಲಿ ತೊಡಗಿರುವವರು ಮತ್ತು ಭಯೋತ್ಪಾದಕ ಕೃತ್ಯಗಳಲ್ಲಿ ಸಕ್ರಿಯರಾಗಿರುವ ವ್ಯಕ್ತಿಗಳೊಂದಿಗೆ ಆಡಳಿತ ಪಕ್ಷ ಸಂಪರ್ಕ ಹೊಂದಿದೆ ಎಂಬ ಸಂದೇಶವನ್ನು ತಳ ಮಟ್ಟಕ್ಕೆ ಕೊಂಡೊಯ್ಯುವುದು ಈ ಸುದ್ದಿಗೋಷ್ಠಿಯ ಉದ್ದೇಶವಾಗಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.

‘ನಮ್ಮ 22 ಹಿರಿಯ ನಾಯಕರು ಮತ್ತು ವಕ್ತಾರರು 22 ನಗರಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಭಯೋತ್ಪಾದಕರ ಜತೆಗಿನ ಬಿಜೆಪಿ ನಂಟುಗಳನ್ನು ಬಹಿರಂಗಪಡಿಸಲಿದ್ದಾರೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಭಯೋತ್ಪಾದಕರೊಂದಿಗೆ ಬಿಜೆಪಿ ನಂಟು ಹೊಂದಿದೆ ಎಂಬುದಕ್ಕೆ ಇಂದು ಪುರಾವೆ ಸಿಗಲಿದೆ ಎಂದು ಅವರು ಬರೆದುಕೊಂಡಿದ್ದಾರೆ.

‘ಬಿಜೆಪಿಗೆ ಭಯೋತ್ಪಾದಕರೊಂದಿಗೆ ಸಂಪರ್ಕವಿದೆ. ಈ ಸಂಬಂಧವನ್ನು ಏನೆಂದು ಕರೆಯುತ್ತಾರೆ?’ ಎಂದು ಟ್ವೀಟ್‌ನಲ್ಲಿ ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT