ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌: ಕಾಂಗ್ರೆಸ್‌ ತೊರೆದ ಮಾಜಿ ಸಚಿವ ಜೋಗಿಂದರ್‌ ಸಿಂಗ್‌ ಮಾನ್‌

Last Updated 15 ಜನವರಿ 2022, 4:35 IST
ಅಕ್ಷರ ಗಾತ್ರ

ಫಗ್ವಾಡ: ಕಾಂಗ್ರೆಸ್‌ ಹಿರಿಯ ಮುಖಂಡ, ಪಂಜಾಬ್‌ ಮಾಜಿ ಸಚಿವ ಜೋಗಿಂದರ್‌ ಸಿಂಗ್‌ ಮಾನ್‌ ಅವರು ಶುಕ್ರವಾರ ಕಾಂಗ್ರೆಸ್‌ನಿಂದ ಹೊರಬಂದರು.

ಪರಿಶಿಷ್ಟ ಜಾತಿ (ಎಸ್‌‍ಸಿ) ಪ್ರಬಲ ನಾಯಕರಾದ ಅವರುಪಕ್ಷದ ಜೊತೆಗಿನ 50 ವರ್ಷಗಳ ಸಹಯೋಗವನ್ನು ಕೊನೆಗಾಣಿಸಿದರು.

ಪರಿಶಿಷ್ಟ ಜಾತಿಗಳಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಬಹುಕೋಟಿ ಹಗರಣ ಮತ್ತು ಫಗ್ವಾಡ ಪಟ್ಟಣಕ್ಕೆ ಜಿಲ್ಲೆಯ ಸ್ಥಾನಮಾನಗಳನ್ನು ನೀಡುವ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಕಾರಣ ಅವರು ರಾಜೀನಾಮೆ
ನೀಡಿದ್ದಾರೆ ಎನ್ನಲಾಗಿದೆ. ಪಕ್ಷದ ಸದಸ್ಯತ್ವ ಮತ್ತು ಪಂಜಾಬ್‌ ಆಗ್ರೋ ಇಂಡಸ್ಟ್ರೀಸ್‌ ಕಾರ್ಪೊರೇಷನ್‌ನ ಅಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದರು.

‘ನಾನು ಕಾಂಗ್ರೆಸ್‌ ಸದಸ್ಯನಾಗಿಯೇ ಸಾಯಬೇಕು ಎಂಬ ಕನಸು ಕಂಡಿದ್ದೆ. ಆದರೆ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ ಹಗರಣದ ತಪ್ಪಿತಸ್ಥರನ್ನು ಕಾಂಗ್ರೆಸ್‌ ಪೋಷಿಸುತ್ತಿರುವುದನ್ನು ನೋಡಿದ ಬಳಿಕ ಪಕ್ಷದಲ್ಲೇ ಉಳಿಯಲು ನನ್ನ ಆತ್ಮಸಾಕ್ಷಿ ಬಿಡುತ್ತಿಲ್ಲ’ ಎಂದುಕಾಂಗ್ರೆಸ್‌ ಅಧ್ಯಕ್ಷೆಸೋನಿಯಾ ಗಾಂಧಿ ಅವರಿಗೆತಮ್ಮ ರಾಜೀನಾಮೆ ಕುರಿತು ಮಾನ್‌ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT