ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಮೀನು ಬಳಿಕ ವಿಚಾರಣಾಧೀನ ಕೈದಿಗಳ ಬಿಡುಗಡೆ ವಿಳಂಬ: ಸುಪ್ರೀಂ ಮಾರ್ಗಸೂಚಿ 

Last Updated 2 ಫೆಬ್ರುವರಿ 2023, 15:57 IST
ಅಕ್ಷರ ಗಾತ್ರ

ನವದೆಹಲಿ; ಜಾಮೀನು ಪಡೆದ ಬಳಿಕವೂ ಹಲವಾರು ವಿಚಾರಣಾಧೀನ ಕೈದಿಗಳು ಜೈಲಿನಲ್ಲಿದ್ದಾರೆ. ತಿಂಗಳೊಳಗೆ ಬಾಂಡ್‌ಗಳನ್ನು ಸಲ್ಲಿಸದಿದ್ದರೆ ವಿಧಿಸಲಾದ ಷರತ್ತುಗಳನ್ನು ಮಾರ್ಪಡಿಸುವಂತೆ ಸಂಬಂಧಪಟ್ಟ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಅಭಯ್ ಎಸ್.ಓಕಾ ಅವರ ಪೀಠ, ಆರೋಪಿ ಅಥವಾ ಅಪರಾಧಿಯ ಬಿಡುಗಡೆ ವಿಳಂಬಕ್ಕೆ ಸ್ಥಳೀಯ ಭದ್ರತಾ ಠೇವಣಿ ಒತ್ತಾಯವೂ ಒಂದು ಕಾರಣ ಎಂಬುದನ್ನು ನ್ಯಾಯಾಲಯ ಗಮನಿಸಿದ್ದು, ಅಂತಹ ಸಂದರ್ಭಗಳಲ್ಲಿ ನ್ಯಾಯಾಲಯಗಳು ಸ್ಥಳೀಯ ಶ್ಯೂರಿಟಿ ಷರತ್ತು ವಿಧಿಸುವಂತಿಲ್ಲ ಎಂದು ಸೂಚಿಸಿದೆ.

‘ವಿಚಾರಣಾಧೀನ ಕೈದಿ ಅಥವಾ ಅಪರಾಧಿ ಬಿಡುಗಡೆಯಾದ ನಂತರ ಜಾಮೀನು ಬಾಂಡ್‌ಗಳು ಅಥವಾ ಭದ್ರತಾ ಠೇವಣಿ ಒದಗಿಸಬಹುದು ಎಂಬ ಸಂದರ್ಭಗಳಲ್ಲಿ, ಸೂಕ್ತ ಪ್ರಕರಣದಲ್ಲಿ ನ್ಯಾಯಾಲಯ ಆರೋಪಿಗೆ ನಿರ್ದಿಷ್ಟ ಅವಧಿಗೆ ತಾತ್ಕಾಲಿಕ ಜಾಮೀನು ನೀಡುವುದನ್ನು ಪರಿಗಣಿಸಬಹುದು’ ಎಂದು ಹೇಳಿದೆ.

ಜಾಮೀನು ನೀಡಿದ ದಿನಾಂಕದಿಂದ ತಿಂಗಳೊಳಗೆ ಜಾಮೀನು ಬಾಂಡ್‌ಗಳನ್ನು ಒದಗಿಸದಿದ್ದರೆ, ಸಂಬಂಧಪಟ್ಟ ನ್ಯಾಯಾಲಯ ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಳ್ಳಬಹುದು. ಜಾಮೀನಿನ ಷರತ್ತುಗಳಿಗೆ ಮಾರ್ಪಾಡು ಅಥವಾ ಸಡಿಲಿಕೆ ಅಗತ್ಯವಿದೆಯೇ ಎಂದು ಪರಿಗಣಿಸಬಹುದು ಎಂದು ಪೀಠ ಹೇಳಿದೆ.

ಜಾಮೀನು ಆದೇಶದ ಪ್ರತಿಯನ್ನು ಅದೇ ದಿನ ಅಥವಾ ಮರುದಿನ ಜೈಲು ಅಧೀಕ್ಷಕರ ಮೂಲಕ ಕೈದಿಗೆ ಇ-ಮೇಲ್ ಮಾಡಬೇಕಾಗುತ್ತದೆ ಎಂದು ನಿರ್ದೇಶಿಸಿದೆ.

ಜಾಮೀನಿನ ದಿನಾಂಕದಿಂದ ಏಳು ದಿನಗಳಲ್ಲಿ ವಿಚಾರಣಾಧೀನ ಕೈದಿಯನ್ನು ಬಿಡುಗಡೆ ಮಾಡದಿದ್ದರೆ ಜೈಲು ಅಧೀಕ್ಷಕರು ಕೈದಿ ಬಿಡುಗಡೆ ಮಾಡಲು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡುವ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳಿಗೆ (ಡಿಎಲ್‌ಎಸ್‌ಎ) ತಿಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT